ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ನಗರದ ವಿವಿಧೆಡೆ ‘ಯೆಲ್ಲೋ ಪೇಜಸ್‌’ ವಿತರಣೆ

By Staff
|
Google Oneindia Kannada News

ಇಂದು ನಗರದ ವಿವಿಧೆಡೆ ‘ಯೆಲ್ಲೋ ಪೇಜಸ್‌’ ವಿತರಣೆ
ಬೆಂಗಳೂರಿನ ಕೈಗನ್ನಡಿ ಈಗ ನಿಮ್ಮ ಮನೆಬಾಗಿಲಿಗೆ...

ಬೆಂಗಳೂರು : ಗೆಟಿಟ್‌ ಬಿ2ಬಿ ಯೆಲ್ಲೋ ಪೇಜಸ್‌ಗಳನ್ನು ಸೋಮವಾರ ಬೆಳಗ್ಗೆ 10ರಿಂದ ಸಂಜೆ 6ರ ತನಕ ನಗರದ ವಿವಿಧೆಡೆ ಉಚಿತವಾಗಿ ಗೆಟಿಟ್‌ ಇನ್ಫೋಮೀಡಿಯರಿ ಲಿಮಿಟೆಡ್‌ ಹಂಚಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಗರದ ಮನೆ ಬಾಗಿಲಲ್ಲಿ ಉಚಿತವಾಗಿ ಯೆಲ್ಲೋ ಪೇಜಸ್‌ ಪಡೆಯುವ ಅವಕಾಶ ಸಾರ್ವಜನಿಕರಿಗೆ ಲಭ್ಯವಾಗಿದೆ. ಕುಮಾರ ಪಾರ್ಕ್‌, ಶೇಷಾದ್ರಿಪುರ, ಮಲ್ಲೇಶ್ವರ, ಬಸವೇಶ್ವರ ನಗರ, ಕಮಲಾನಗರ, ಮಹಾಲಕ್ಷ್ಮಿಲೇಔಟ್‌, ನಂದಿನಿ ಲೇಔಟ್‌, ರಾಜಾಜೀನಗರ, ರಿಚ್‌ಮಂಡ್‌ ರಸ್ತೆ, ಚಾಮರಾಜ ಪೇಟೆ, ಮೈಸೂರು ರಸ್ತೆ ಮತ್ತು ಬಸವನಗುಡಿ ಪ್ರದೇಶಗಳಲ್ಲಿ ವಿತರಣೆ ನಡೆಯಲಿದೆ.

ಹಳೆಯ ಗೆಟಿಟ್‌ ಯೆಲ್ಲೋ ಪೇಜಸ್‌ಗಳನ್ನು ಹಿಂದಿರುಗಿಸಿ ಹೊಸ ಗೆಟಿಟ್‌ ಯೆಲ್ಲೋ ಪೇಜಸ್‌ಗಳನ್ನು ಪಡೆಯಬಹುದು. ಸಾರ್ವಜನಿಕರು ಕನ್ನಿಂಗ್‌ ಹ್ಯಾಂ ರಸ್ತೆಯ ಗೆಟಿಟ್‌ ಇನ್ಫೋಮೀಡಿಯರಿ, ರಂಕಾ ಚೇಂಬರ್ಸ್‌ನಲ್ಲೂ ಯೆಲ್ಲೋ ಪೇಜಸ್‌ಗಳನ್ನು ಪಡೆಯಬಹುದು.
ವಿವರಗಳಿಗೆ ಸಂಪರ್ಕಿಸಿ 2287 7777, 98456 92326

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X