ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1984ರ ಸಿಖ್‌ ಹತ್ಯಾಕಾಂಡದಲ್ಲಿ ಸಚಿವ ಟೈಟ್ಲರ್‌ ಕೈ

By Staff
|
Google Oneindia Kannada News

1984ರ ಸಿಖ್‌ ಹತ್ಯಾಕಾಂಡದಲ್ಲಿ ಸಚಿವ ಟೈಟ್ಲರ್‌ ಕೈ
ಲೋಕಸಭೆಯ ಉಭಯ ಸದನಗಳಲ್ಲಿ ನಾನಾವತಿ ವರದಿ ಸ್ಪೋಟ

ನವದೆಹಲಿ : 1984ರ ಸಿಖ್‌ವಿರೋಧಿ ದಂಗೆಯಲ್ಲಿ ಕೇಂದ್ರ ಸಚಿವ ಜಗದೀಶ್‌ ಟೈಟ್ಲರ್‌ ಅವರ ಕೈವಾಡವಿದ್ದು ಅವರ ಮೇಲೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ನಾನಾವತಿ ವರದಿ ಶಿಫಾರಸು ಮಾಡಿದೆ.

ಲೋಕಸಭೆಯ ಉಭಯಸದನಗಳಲ್ಲಿ ಸೋಮವಾರ ಮಂಡನೆಯಾದ ನಾನಾವತಿ ವರದಿ, ರಾಜಕೀಯವಾಗಿ ಕಾವು ಮೂಡಿಸಿತ್ತು. ಜಗದೀಶ್‌ ಟೈಟ್ಲರ್‌ ಅಲ್ಲದೇ, ಕಾಂಗ್ರೆಸ್‌ನ ಸಂಸದರಾದ ಸಜ್ಜನ್‌ಕುಮಾರ್‌ ಮತ್ತು ಬಲವಾನ್‌ ಖಖೆಕ್ಕರ್‌ ಅವರು ಹಿಂಸಾಚಾರದಲ್ಲಿ ಪಾಲ್ಗಂಡಿದ್ದರೆಂದು ವರದಿ ತಿಳಿಸಿದೆ.

ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ರಾಜಧಾನಿಯಲ್ಲಿ ದೊಂಬಿ ಮತ್ತು ಭೀಕರ ಹಿಂಸಾಚಾರ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು 2000ನೇ ಇಸವಿಯಲ್ಲಿ ಎನ್‌ಡಿಎ ಸರ್ಕಾರ ನಾನಾವತಿ ಆಯೋಗವನ್ನು ರಚಿಸಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X