ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣನಿಗೆ ಕೇಂದ್ರದ ನಮನ, ಸದ್ಯದಲ್ಲಿಯೇ‘ಬಸವ ನಾಣ್ಯ’

By Staff
|
Google Oneindia Kannada News

ಅಣ್ಣನಿಗೆ ಕೇಂದ್ರದ ನಮನ, ಸದ್ಯದಲ್ಲಿಯೇ‘ಬಸವ ನಾಣ್ಯ’
ಬಸವ ಸಮಿತಿಯ ಕಾರ್ಯಕ್ರಮದಲ್ಲಿ ಬಸವೇಶ್ವರರ ಅನಿಮೇಟೆಡ್‌ ಚಿತ್ರ ಬಿಡುಗಡೆ

ಬೆಂಗಳೂರು : ಮನುಕುಲಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ವಚನ ಸಾಹಿತ್ಯದ ನೇತಾರ ಶ್ರೀ ಬಸವೇಶ್ವರರ ಭಾವಚಿತ್ರವನ್ನು ನಾಣ್ಯಗಳ ಮೇಲೆ ಮುದ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ನಗರದಲ್ಲಿ ಬಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಒಬ್ಬ ಮಹಾತ್ಮ ಮತ್ತು ಸಂತ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಅಂದಿನ ಅನುಭವ ಮಂಟಪ ಈ ದೇಶದ ಮೊಟ್ಟ ಮೊದಲ ಪಾರ್ಲಿಮೆಂಟು ಎಂದು ಬಣ್ಣಿಸಿದರು.

ಬಸವ ನಾಣ್ಯದ ಬಿಡುಗಡೆಗೆ ಸೂಕ್ತ ದಿನಾಂಕ ನಿಗದಿ ಪಡಿಸುವಂತೆ ಸಚಿವರು ಬಸವಸಮಿತಿಗೆ ಸೂಚನೆ ನೀಡಿದರು. ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಯೋಜನಾ ಖಾತೆ ಸಹಾಯಕ ಸಚಿವ ಎಂ.ವಿ.ರಾಜಶೇಖರ್‌, ಕೂಡಲ ಸಂಗಮದಲ್ಲಿ ನಾಣ್ಯ ಬಿಡುಗಡೆ ಮಾಡುವಂತೆ ಸಲಹೆ ನೀಡಿದರು.

ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, , ಗದಗದ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ, ಪ್ರೊ.ಚಂದ್ರಶೇಖರ್‌ ಪಾಟೀಲ, ಬಸವ ಸಮಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಕೆ.ಕೆ.ಮೂರ್ತಿ ಮತ್ತಿತರರು ಹಾಜರಿದ್ದರು.

ಈ ಸಂದರ್ಭದಲ್ಲಿ ಬಿಡುಗಡೆಗೊಂಡ ‘ಶ್ರೀಬಸವೇಶ್ವರ’ ಎಂಬ ಅನಿಮೇಟೆಡ್‌ ಚಿತ್ರ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದ್ದು, ಬಸವ ಭವನದಲ್ಲಿ ಲಭ್ಯವೆಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X