ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ಒಬ್ಬ ಹಿಟ್ಲರ್‌ : ಗುಡುಗಿದ ಸಿದ್ಧರಾಮಯ್ಯ

By Super
|
Google Oneindia Kannada News

ದೇವೇಗೌಡ ಒಬ್ಬ ಹಿಟ್ಲರ್‌ : ಗುಡುಗಿದ ಸಿದ್ಧರಾಮಯ್ಯ
ಸಿದ್ಧರಾಮಯ್ಯ-ಜಾರ್ಜ್‌ ಫರ್ನಾಂಡಿಸ್‌ ಭೇಟಿ, ರಾಜಕೀಯ ವಲಯದಲ್ಲಿ ಸಂಚಲನ

ಬೆಂಗಳೂರು : ಶುಕ್ರವಾರವಷ್ಟೇ ವಜಾಗೊಂಡಿರುವ ಸಿದ್ಧರಾಮಯ್ಯ, ದೇವೇಗೌಡ ಒಬ್ಬ ಸರ್ವಾಧಿಕಾರಿ, ಅವರು ಹಿಟ್ಲರ್‌ಗೇನೂ ಕಡಿಮೆಯಿಲ್ಲ ಎಂದು ಕಿಡಿಕಾರಿದ್ದಾರೆ.

ವಜಾಗೊಂಡ ನಂತರ ಮೊಟ್ಟಮೊದಲ ಬಾರಿಗೆ ಶನಿವಾರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ನನ್ನನ್ನು ವಜಾಮಾಡಿದ ರೀತಿ ಪ್ರಜಾಪ್ರಭುತ್ವ ವಿರೋಧಿಯಾದುದು. ವಿನಾಕಾರಣ ಅವರು ಈ ದುಷ್ಕೃತ್ಯ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬೆಂಬಲಿಗ ಸಚಿವರು ಸಮರ್ಥವಾಗಿ ತಮ್ಮ ಖಾತೆ ನಿಭಾಯಿಸುತ್ತಿದ್ದರು, ಅವರನ್ನೂ ವಜಾಮಾಡಿ ಅಟ್ಟಹಾಸ ಮೆರೆದಿದ್ದಾರೆ ಎಂದು ಹೇಳಿದರು.

ಜನತಾದಳ ನನ್ನ ಮನೆ, ನಾನು ಜಾತ್ಯತೀತ ಜನತಾದಳದಲ್ಲಿದ್ದೇನೆ, ಜಾತ್ಯಾತೀತ ಜನತಾದಳ ನನ್ನ ಪಕ್ಷ. ನಾನು ಯಾವ ಪಕ್ಷವನ್ನೂ ಸೇರಲಾರೆ ಎಂದು ಭಾವುಕರಾಗಿ ನುಡಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗುವಾಗ ದೇವೇಗೌಡ ಬೇಕೆಂತಲೇ ಮುಖ್ಯಮಂತ್ರಿ ಸ್ಥಾನ ಜೆಡಿಎಸ್‌ಗೆ ಬೇಡ ಎಂದರು. ಕಾರಣವೇನೆಂದರೆ, ನನ್ನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬರುವುದನ್ನು ತಡೆಯುವುದು ಅವರ ಉದ್ದೇಶವಾಗಿತ್ತು ಅಷ್ಟೇ ಎಂದು ಅಳಲು ತೋಡಿಕೊಂಡರು.

ಫರ್ನಾಂಡಿಸ್‌-ಸಿದ್ಧರಾಮಯ್ಯ ಭೇಟಿ : ಈ ಮಧ್ಯೆ ಎನ್‌ಡಿಎ ಸಂಚಾಲಕ ಹಾಗೂ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಸಿದ್ಧರಾಮಯ್ಯ ಭೇಟಿ ನಡೆಸಿದ್ದಾರೆ. ಭೇಟಿಯ ಫಲಶ್ರುತಿ ಏನಾಗಬಹುದೆಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ಸಿದ್ಧರಾಮಯ್ಯ ಅವರನ್ನು ತಮ್ಮ ಪಕ್ಷಕ್ಕೆ ಬರುವಂತೆ ಫರ್ನಾಂಡಿಸ್‌ ಆಹ್ವಾನ ನೀಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ.

ಪತ್ರಕರ್ತರು, ಸಿದ್ಧರಾಮಯ್ಯ ಅವರನ್ನು ನಿಮ್ಮ ಪಕ್ಷಕ್ಕೆ ಆಹ್ವಾನ ಮಾಡಿದಿರಾ ಎಂದು ಕೇಳಿದಾಗ, ಸಿದ್ಧರಾಮಯ್ಯ ಜಾಣ ಮನುಷ್ಯ ಅವರು ಸಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಜಾರಿಕೆಯ ಉತ್ತರ ನೀಡಿದರು.

(ಪಿ ಟಿ ಐ)

ಮುಖಪುಟ / ವಾರ್ತೆಗಳು

English summary
George Fernandes meets Siddaramaiah. Assumably woos to join his party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X