ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ತಿಂಗಳೊಳಗೆ ಚಲನಚಿತ್ರ ಅಕಾಡೆಮಿ ಸ್ಥಾಪನೆ : ಧರಂ

By Staff
|
Google Oneindia Kannada News

2ತಿಂಗಳೊಳಗೆ ಚಲನಚಿತ್ರ ಅಕಾಡೆಮಿ ಸ್ಥಾಪನೆ : ಧರಂ
ಚಿತ್ರನಗರಿಗೆ ಹೆಸರಘಟ್ಟದಲ್ಲಿ 365 ಎಕರೆ ಮೀಸಲು, ಗೂಂಡಾ ಕಾಯ್ದೆ ಶೀಘ್ರವೇ ಜಾರಿಗೆ

ಬೆಂಗಳೂರು : ಎರಡು ತಿಂಗಳೊಳಗೆ ಚಲನಚಿತ್ರ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಪ್ರಕಟಿಸಿದ್ದಾರೆ.

ಅವರು ಬುಧವಾರ 52ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಗಮನ ಸೆಳೆಯುವಂತಹ ಚಲನಚಿತ್ರಗಳು ನಿರ್ಮಾಣಗೊಳ್ಳುತ್ತಿರುವುದು ಹರ್ಷದ ವಿಚಾರ. ಕನ್ನಡ ಚಿತ್ರರಂಗಕ್ಕೆ ಮನ್ನಣೆ ತಂದುಕೊಟ್ಟ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ಅಭಿನಂದನಾರ್ಹರು ಎಂದು ಹೇಳಿದರು.

ಚಲನಚಿತ್ರ ಅಕಾಡೆಮಿ ಸ್ಥಾಪನೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಹೆಸರಘಟ್ಟದಲ್ಲಿ ಮೀಸಲಿಟ್ಟಿರುವ 365 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ. ನಕಲಿ ವೀಡಿಯೋ ಹಾವಳಿ ನಿಯಂತ್ರಣಕ್ಕೆ ಗೂಂಡಾ ಕಾಯ್ದೆ ಜಾರಿಗೆ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಗಿನ್ನೆಸ್‌ ದಾಖಲೆಗೆ ಪಾತ್ರವಾದ ಶಾಂತಿ ಚಿತ್ರದ ನಿರ್ಮಾಪಕ ರಮೇಶ್‌ ಯಾದವ್‌, ನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಟಿ ಭಾವನಾ ಅವರಿಗೆ ಸರ್ಕಾರದ ವತಿಯಿಂದ ನೆರವು ನೀಡಲಾಗುವುದು ಎಂದು ಧರ್ಮಸಿಂಗ್‌ ಘೋಷಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X