• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ಮೃಗಾಲಯಕ್ಕೆ ಪುನಶ್ಚೇತನದ ಭಾಗ್ಯ

By Staff
|

ಮೈಸೂರು ಮೃಗಾಲಯಕ್ಕೆ ಪುನಶ್ಚೇತನದ ಭಾಗ್ಯ

ಪುನಶ್ಚೇತನಕ್ಕೆ ಬೃಹತ್‌ ಯೋಜನೆ ರೂಪುಗೊಳ್ಳಲಿದ್ದು, ಇನ್ನು ಮುಂದೆ ಅತ್ಯಾಧುನಿಕ ಮೃಗಾಲಯಕ್ಕೆ ಪ್ರತ್ಯಕ್ಷವಾಗಲಿದೆ

ಮೈಸೂರು : ಶತಮಾನದಷ್ಟು ಹಳೆಯದಾದ ಶ್ರೀ ಚಾಮರಾಜೇಂದ್ರ ಮೃಗಾಯಲವನ್ನು ಪುನಶ್ಚೇತನಗೊಳಿಸಲು ಬೃಹತ್‌ಯೋಜನೆಯಾಂದನ್ನು ರೂಪಿಸಲು ನಿರ್ಧರಿಸಲಾಗಿದೆ ಎಂದು ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್‌ ತಿಳಿಸಿದ್ದಾರೆ.

ಚಾಮರಾಜೇಂದ್ರ ಒಡೆಯರ್‌ 9 ಎಕರೆ ಪ್ರದೇಶದಲ್ಲಿ ಸ್ಥಾಪಿಸಿದ ಮೈಸೂರು ಮೃಗಾಲಯವು ಇಂದು 90 ಎಕರೆಯಷ್ಟು ವಿಸ್ತಾರಗೊಂಡಿದೆ. ಇಲ್ಲಿನ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಯೋಜನೆಯಾಂದನ್ನು ಹಮ್ಮಿಕೊಳ್ಳಲಾಗಿದೆ. ಇದು ಹಂತ ಹಂತವಾಗಿ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಮೃಗಾಲಯದ ವೈಜ್ಞಾನೀಕರಣಕ್ಕಾಗಿ ತಜ್ಞರ ಮತ್ತು ಸಾರ್ವಜನಿಕರ ಸಲಹೆಯ ಜೊತೆಗೆ ದೆಹಲಿ, ನಂದಕಣನ್‌ ಮತ್ತು ಚೆನ್ನೈ ಮೃಗಾಲಯದ ಬಗ್ಗೆ ಕರ್ನಾಟಕ ಮೃಗಾಲಯ ಉಸ್ತುವಾರಿ ಸಮಿತಿಯು ಅಧ್ಯಯನ ನಡೆಸಿ ನೂತನ ಮಹತ್ವದ ಯೋಜನೆಯನ್ನು ರೂಪಿಸಲಾಗುವುದು. ಮೃಗಾಲಯದ 90ಎಕರೆ ಜಾಗದಲ್ಲಿ ಶೇ.80ರಷ್ಟನ್ನು ಪರಿಸರ ಸೌಂದರ್ಯಕ್ಕೆ ಉಳಿಸಿಕೊಂಡು, ಉಳಿದ ಶೇ.20ರಷ್ಟನ್ನು ಪ್ರಾಣಿಗಳ ವಾಸ್ತವ್ಯಕ್ಕೆ ಮೀಸಲಿಡಲಾಗುವುದು. ಮೃಗಾಲಯದ ಪ್ರಾಣಿಗಳ ನಿರ್ವಹಣೆ ಮತ್ತು ಸಂಗೋಪನೆಯ ಬಗ್ಗೆ ಇನ್ನೂ ಹೆಚ್ಚಿನದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ಹೊಸಯೋಜನೆಯು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಿದೆ ಎಂದು ಮನೋಜ್‌ ವಿವರಿಸಿದರು.

ಮೃಗಾಲಯ ನಿರ್ಮಾಣಕ್ಕೆ ಸಲಹೆ ನೀಡಲಿಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ: ಅಧ್ಯಕ್ಷರು ಮೈಸೂರು ಮೃಗಾಲಯ, ಮೈಸೂರು- 570010.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more