ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಸಾವಿರ ಐಟಿ ಮಾಹಿತಿಯ ಕೈಪಿಡಿ ಮಾರುಕಟ್ಟೆಯಲ್ಲಿ ಲಭ್ಯ

By Staff
|
Google Oneindia Kannada News

15 ಸಾವಿರ ಐಟಿ ಮಾಹಿತಿಯ ಕೈಪಿಡಿ ಮಾರುಕಟ್ಟೆಯಲ್ಲಿ ಲಭ್ಯ
‘ದಿ ಐಟಿ ಬ್ಲಾಕ್‌ ಬುಕ್‌’ ಕೈಪಿಡಿ ಮತ್ತು ಸಿಡಿ ಸೇರಿದಂತೆ 499ರೂ ಬೆಲೆಯನ್ನು ಹೊಂದಿದೆ

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯ ಕೈಪಿಡಿ ‘ದಿ ಐಟಿ ಬ್ಲಾಕ್‌ ಬುಕ್‌’ ಅನ್ನು ಮಣಿಪಾಲ್‌ ಇನ್ಫೋಮೀಡಿಯಾ ಸರ್ವೀಸ್‌ ಪ್ರೆೃವೇಟ್‌ ಲಿಮಿಟೆಡ್‌ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದಿ ಐಟಿ ಬ್ಲಾಕ್‌ ಬುಕ್‌ ಎನ್ನುವ ಕೈಪಿಡಿಯಲ್ಲಿ ಮಾಹಿತಿ ತಂತ್ರಜ್ಞಾನ, ಐಟಿಗೆ ಸಂಬಂಧಿಸಿದ ಉತ್ಪನ್ನ, ಸೇವೆಗಳನ್ನು ಒಳಗೊಂಡ ಎಲ್ಲಾ ರೀತಿಯ ಮಾಹಿತಿಯು ಮುದ್ರಣ ಮತ್ತು ಸಿ.ಡಿ.ರೋಮ್‌ ಮೂಲಕ ದೊರೆಯಲಿದೆ. ಜೊತೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉತ್ಪನ್ನಗಳು, ಮಾರಾಟಗಾರರು, ಸೇವೆಗಳು ಹಾಗೂ ಖರೀದಿದಾರರ ಸಮಗ್ರ ಮಾಹಿತಿ ಲಭಿಸಲಿದೆ. ಸರಳ ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, ಹೇಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಎನ್ನುವ ವಿವರಣೆಯನ್ನೂ ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ದಿ ಐಟಿ ಬ್ಲಾಕ್‌ ಬುಕ್‌ನ ಸಿ.ಡಿ.ರೋಮ್‌ ಸೇರಿದಂತೆ 499 ರೂ ಬೆಲೆಯನ್ನು ಹೊಂದಿದೆ. ಕಳೆದ ವರ್ಷದ ಆವೃತ್ತಿಯು ಸಮಾರು 400 ಪುಟಗಳನ್ನು ಹೊಂದಿದ್ದು, 15ಸಾವಿರ ಐಟಿ, ಐಟಿ ಸಂಬಂಧ ಸಂಪರ್ಕದ ಮಾಹಿತಿಯನ್ನು ಹೊಂದಿತ್ತು ಎಂದು ಸಂಸ್ಥೆ ಹೇಳಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X