• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲೇಡ್‌ ಕಂಪನಿಗಳಿಂದ ಪಾರಾಗಲೊಂದು ವೆಬ್‌ಸೈಟ್‌!

By Super
|

ಬ್ಲೇಡ್‌ ಕಂಪನಿಗಳಿಂದ ಪಾರಾಗಲೊಂದು ವೆಬ್‌ಸೈಟ್‌!

'ಅಖಿಲ ಕರ್ನಾಟಕ ಹಣ ಹೂಡಿಕೆದಾರರ ವೇದಿಕೆ' ಅಸ್ತಿತ್ವಕ್ಕೆ

ಬೆಂಗಳೂರು : ಹಣಕಾಸು ಸಂಸ್ಥೆಗಳಲ್ಲಿ ಹಣ ತೊಡಗಿಸುವ ಹೂಡಿಕೆದಾರರಿಗೆ ನೆರವಾಗಲು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆ ವೆಬ್‌ಸೈಟ್‌ಗೆ ಚಾಲನೆ ನೀಡಿದೆ.

ಅಧಿಕ ಬಡ್ಡಿ ಆಸೆಗೆ ಬ್ಲೇಡ್‌ ಕಂಪನಿಗಳಿಂದ ಪಂಗನಾಮ ಹಾಕಿಸಿಕೊಳ್ಳುವ ಪರಿಪಾಠ ಹೆಚ್ಚುತ್ತಿರುವ ಈ ದಿನಗಳಲ್ಲಿ , ಹಣಕಾಸು ಸಂಸ್ಥೆಗಳ ಪೂರ್ವಾ ಪರ ತಿಳಿಸುವ www.stopfraud.in ವೆಬ್‌ಸೈಟ್‌ ಗ್ರಾಹಕ ಜಾಗೃತಿಗೆ ಪೂರಕವಾಗುವ ವಿಶ್ವಾಸವನ್ನು ಸಂಸ್ಥೆ ಹೊಂದಿದೆ.

ನೋಂದಾಯಿತ ಬ್ಯಾಂಕ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳು, ಟ್ರಸ್ಟ್‌ಗಳು, ಚಾರಿಟಿ ಸಂಸ್ಥೆಗಳ ಬಗೆಗಿನ ಎಲ್ಲ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಲಭ್ಯ. ಹಣ ಹೂಡುವಾಗ, ಶೇರುಗಳನ್ನು ಖರೀದಿಸುವಾಗ, ಸಾಲ ಪಡೆಯುವಾಗ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಇಲ್ಲಿ ಮಾಹಿತಿ ಉಂಟು.

ಹೂಡಿಕೆದಾರರ ಸಂಘ : ವಿನಿ ವಿಂಕ್‌ನ ವಂಚನೆಯ ಹಿನ್ನೆಲೆಯಲ್ಲಿ ಹಣ ಹೂಡಿಕೆದಾರರ ಹಕ್ಕು-ಬಾದ್ಯತೆಗಳನ್ನು ಕಾಪಾಡಲು ರಾಜ್ಯ ಮಟ್ಟದ 'ಅಖಿಲ ಕರ್ನಾಟಕ ಹಣ ಹೂಡಿಕೆದಾರರ ವೇದಿಕೆ' ಅಸ್ತಿತ್ವಕ್ಕೆ ಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಕೆ. ಕೃಷ್ಣಮೂರ್ತಿ,

ಅಧ್ಯಕ್ಷರು,

'ಅಖಿಲ ಕರ್ನಾಟಕ ಹಣ ಹೂಡಿಕೆದಾರರ ವೇದಿಕೆ'

ನಂ. 22, 4ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ,

1ನೇ ಹಂತ, 5ನೇ ಘಟ್ಟ, ಪಶ್ಚಿಮ ಕಾರ್ಡ್‌ ರಸ್ತೆ,

ಮಹಾ ಗಣಪತಿನಗರ, ಬೆಂಗಳೂರು-44

ದೂರವಾಣಿ ಸಂಖ್ಯೆ : 23406089

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To check financial frauds and educate the people about firms accepting deposits by promising high rates of interest, the Karnataka State Souhardha Federal Cooperative Ltd. (KSSFCL) has launched a website on August 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more