ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲೈಯನ್ಸ್‌ನೊಂದಿಗೆ ಏರ್‌ ಡೆಕ್ಕನ್‌ ಅನುಸಂಧಾನ

By Staff
|
Google Oneindia Kannada News

ರಿಲೈಯನ್ಸ್‌ನೊಂದಿಗೆ ಏರ್‌ ಡೆಕ್ಕನ್‌ ಅನುಸಂಧಾನ
ಮುಂಬಯಿ ಮಳೆಯಿಂದ ಏರ್‌ಡೆಕ್ಕನ್‌ಗೆ ಪ್ರತಿದಿನ 75 ಲಕ್ಷ ರೂ. ನಷ್ಟ

ಬೆಂಗಳೂರು : ದೇಶದ ಮೊದಲ ಅತ್ಯಂತ ಕಡಿಮೆ ದರದ ವಾಯುಯಾನ ಸಂಸ್ಥೆ ಏರ್‌ಡೆಕ್ಕನ್‌, ತಮ್ಮ ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್‌ ವಿತರಣೆಗಾಗಿ ರಿಲೈಯನ್ಸ್‌ ವೆಬ್‌ವಲ್ಡ್‌ನೊಂದಿಗೆ ಕೈಜೋಡಿಸಿದೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಏರ್‌ಡೆಕ್ಕನ್‌ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್‌ ಡಿ.ಆರ್‌. ಗೋಪಿನಾಥ್‌, ಮುಂಗಡ ಟಿಕೆಟ್‌ ಕಾಯ್ದಿರಿಸಲು ಅಥವಾ ಕಾಯ್ದಿರಿಸದ ಟಿಕೆಟ್‌ ರದ್ದುಗೊಳಿಸಲು ಗ್ರಾಹಕರು ಈಗ ರಾತ್ರಿಯ ಸಮಯದಲ್ಲಿ ಏರ್‌ಪೋರ್ಟ್‌ಗೆ ತೆರಳುವುದು, ಟ್ರಾವಲ್‌ ಏಜೆಂಟ್‌ ಹತ್ತಿರ ಓಡಿಹೋಗುವ ತೊಂದರೆ ಇಲ್ಲ ಎಂದರು.

ಈ ವೆಬ್‌ವಲ್ಡ್‌ನ ಸೇವೆಯಿಂದ ಗ್ರಾಹಕರು ಪರದಾಡುವುದು ತಪ್ಪಲಿದೆ. ವೆಬ್‌ವಲ್ಡ್‌ 365ದಿನಗಳಲ್ಲೂ ನಿರಂತರ ಕಾರ್ಯ ಸಲ್ಲಿಸಲಿದ್ದು, ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ಸಾರ್ವಜನಿಕರಿಗೆ ಸೇವೆಗೆ ತೆರೆಯಲಿದೆ. ದೇಶದೆಲ್ಲೆಡೆ 104 ನಗರಗಳಲ್ಲಿ 241 ರಿಲೈಯನ್ಸ್‌ ವೆಬ್‌ವರ್ಲ್ಡ್‌ಗಳಿವೆ. ಇವುಗಳಲ್ಲಿ ಈ ಸೇವೆ ಪಡೆಯಬಹುದು. ಮುಗಂಡ ಕಾಯ್ದಿರಿಸಿದ ಟಿಕೇಟನ್ನು ರದ್ದುಗೊಳಿಸಲು, ತಮ್ಮ ಹಣವನ್ನು ಹಿಂದಕ್ಕೆ ಪಡೆಯಲು ಈ ವೆಬ್‌ವಲ್ಡ್‌ ನೆರವಾಗಲಿವೆ ಎಂದು ಡಿ.ಆರ್‌.ಗೋಪಿನಾಥ್‌ ತಿಳಿಸಿದರು.

ಮುಂಬಯಿ ಮಳೆಯಿಂದ ಏರ್‌ ಡೆಕ್ಕನ್‌ಗೆ ಪ್ರತಿದಿನ 75 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಸಂಸ್ಥೆ ತಿಳಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X