For Daily Alerts
ಪ್ರೆಸ್‌ಕ್ಲಬ್ ಅಧ್ಯಕ್ಷ ಪೀಠಕ್ಕೆ ಪ್ರಜಾವಾಣಿಯ ಪೊನ್ನಪ್ಪ
ಪ್ರೆಸ್‌ಕ್ಲಬ್ ಅಧ್ಯಕ್ಷ ಪೀಠಕ್ಕೆ ಪ್ರಜಾವಾಣಿಯ ಪೊನ್ನಪ್ಪ
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸದಾಶಿವ ಶೆಣೈ ಪುನರಾಯ್ಕೆ
ಬೆಂಗಳೂರು : ಪ್ರೆಸ್‌ಕ್ಲಬ್‌ನ 2005-06ನೇ ಸಾಲಿನ ಅಧ್ಯಕ್ಷರಾಗಿ ಪ್ರಜಾವಾಣಿಯ ಸಹಾಯಕ ಸಂಪಾದಕ ಎಂ.ಎ.ಪೊನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ವಾರ್ಷಿಕ ಚುನಾವಣೆಯಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವೈ.ಜಿ.ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಸದಾಶಿವ ಶೆಣೈ, ಕಾರ್ಯದರ್ಶಿಯಾಗಿ ಎನ್.ಎಸ್.ಶಂಕರ್, ಖಜಾಂಚಿಯಾಗಿ ಕೆ.ಎಂ.ವೀರೇಶ್ ಆಯ್ಕೆಗೊಂಡಿದ್ದಾರೆ.
ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಎಂ.ಅಶೋಕ್ ಕುಮಾರ್, ಬಿ.ಹರಿಶ್ಚಂದ್ರಭಟ್, ಕೇಶವವಿಟ್ಲ, ಜಿ.ಎಸ್.ನಾರಾಯಣರಾವ್, ಎನ್.ಎಸ್ ಮೃತ್ಯುಂಜಯ ಮತ್ತು ಶಾಂತಮ್ಮ ಆಯ್ಕೆಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ