ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರನ್‌ವೇಲಿ ಜಾರಿದ ವಿಮಾನ : ತಪ್ಪಿದ ಅನಾಹುತ

By Staff
|
Google Oneindia Kannada News

ರನ್‌ವೇಲಿ ಜಾರಿದ ವಿಮಾನ : ತಪ್ಪಿದ ಅನಾಹುತ
ಬೆಂಗಳೂರಿನಿಂದ ಚಿಕಾಗೋಗೆ ಹೊರಟಿದ್ದ ವಿಮಾನ, ಉಳಿಸಿತು ಎಲ್ಲರ ಪ್ರಾಣ...!

ಮುಂಬಯಿ : ಬೆಂಗಳೂರುನಿಂದ ಚಿಕಾಗೋಗೆ ತೆರಳುತ್ತಿದ್ದ ಏರ್‌-ಇಂಡಿಯಾ ಬೋಯಿಂಗ್‌ 747-400 ವಿಮಾನ, ಮಾರ್ಗ ಮಧ್ಯೆ ಮುಂಬಯಿನಲ್ಲಿ ಇಳಿಯುತ್ತಿದ್ದಾಗ ಜಾರಿ ನಿಯಂತ್ರಣ ತಪ್ಪಿ, ರನ್‌ವೇಯಿಂದ ಹೊರ ಚಲಿಸಿದ ಪ್ರಸಂಗ ಶನಿವಾರ ನಡೆಯಿತು.

335 ಪ್ರಯಾಣಿಕರಿದ್ದ ವಿಮಾನ ಶನಿವಾರ ಮುಂಜಾನೆ ಮಳೆಯಿಂದ ನೆನೆದಿದ್ದ ರನ್‌ವೇ ಮೇಲೆ ಇಳಿಯುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಹೊರಗೆ ಚಲಿಸಿತು. ವಿಮಾನ ಚಕ್ರ ರನ್‌ವೇಯಲ್ಲಿನ ವಿದ್ಯುತ್‌ ದೀಪಗಳಿಗೆ ಬಡಿಯಿತು. ರನ್‌ವೇಯಿಂದ ಸುಮಾರು 10-15 ಅಡಿಗಳಷ್ಟು ಮುಂದೆ ಹೋಗಿ ಒದ್ದೆ ಮಣ್ಣಿನಲ್ಲಿ ವಿಮಾನ ಸಿಕ್ಕಿಕೊಂಡಿತು. ಆದರೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಬೆಳಗ್ಗೆ 7ಗಂಟೆಗೆ ಘಟನೆ ಸಂಭವಿಸಿದ್ದು, ಎರಡನೇ ರನ್‌ವೇಯಲ್ಲಿ ವಿಮಾನ ಸಿಕ್ಕಿಕೊಂಡ ಹಿನ್ನೆಲೆಯಲ್ಲಿ ಸುಮಾರು 2 ತಾಸಿಗೂ ಹೆಚ್ಚುಕಾಲ ನಿಲ್ದಾಣವನ್ನು ಬಂದ್‌ ಮಾಡಬೇಕಾಯಿತು. ಹೊರಹೋಗುವ ವಿಮಾನಗಳಿಗಾಗಿ ಮಂಗಳವಾರದಿಂದಲೂ ಮುಚ್ಚಲಾಗಿದ್ದ ಮುಖ್ಯ ರನ್‌ವೇಯನ್ನು ಮುಕ್ತಗೊಳಿಸಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X