ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದಿನದಲ್ಲಿ ಬೆಂಗಳೂರು ಮೆಟ್ರೋ ಭವಿಷ್ಯ ನಿರ್ಧಾರ

By Staff
|
Google Oneindia Kannada News

ಐದು ದಿನದಲ್ಲಿ ಬೆಂಗಳೂರು ಮೆಟ್ರೋ ಭವಿಷ್ಯ ನಿರ್ಧಾರ
ರಾಜ್ಯದ ದೃಷ್ಟಿ ಆಗಸ್ಟ್‌ 5ರಂದು ನಡೆಯುವ ಸಭೆಯತ್ತ ಕೇಂದ್ರಿತ

ಬೆಂಗಳೂರು : ಮೆಟ್ರೋ ರೈಲು ಯೋಜನೆ ಜಾರಿಯ ಬಗ್ಗೆ ಆಗಸ್ಟ್‌ 5ರಂದು ದಿಲ್ಲಿಯಲ್ಲಿ ನಡೆಯುವ ಬಂಡವಾಳ ಹೂಡಿಕೆ ಮಂಡಳಿ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

ಅವರು ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶನಿವಾರ ಮಾತನಾಡುತ್ತಿದ್ದರು.

ಬೆಂಗಳೂರಿಗೆ ಮೆಟ್ರೋ ಅಗತ್ಯ ಎಂಬುದು ಕೇಂದ್ರ ಸರ್ಕಾರದ ಗಮನದಲ್ಲಿದೆ. ಬಂಡವಾಳ ಹೂಡಿಕೆ ಮಂಡಳಿ, ಈ ಹಿಂದೆ ನಡೆಸಿದ ಸಭೆಯಲ್ಲಿ ಯೋಜನೆ ಬಗ್ಗೆ ಪೂರ್ಣ ಪರಿಶೀಲನೆ ನಡೆಸಲಾಗಿದೆ. ಮೆಟ್ರೋಗೆ ಅನುಮತಿ ನೀಡುವ ನಿಟ್ಟಿನಲ್ಲಿ ಈಗಿನ ಸಭೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುಮಾರು 6300 ಕೋಟಿ ರೂಪಾಯಿ ವೆಚ್ಚದ ಮೆಟ್ರೋ ಯೋಜನೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಯೋಜನಾ ಆಯೋಗದ ತಾತ್ವಿಕ ಒಪ್ಪಿಗೆಯೂ ದೊರೆತಿದೆ. ದಿಲ್ಲಿ ಮೆಟ್ರೋ ಯೋಜನೆಯ ಶೇ.65ರಷ್ಟು ಪಾಲನ್ನು ಜಪಾನ್‌ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್‌ ನೀಡಿದೆ. ಈ ಯೋಜನೆಗೂ ಜಪಾನ್‌ ಬ್ಯಾಂಕ್‌ನಿಂದ ಹೆಚ್ಚು ನೆರವು ದೊರೆತರೆ ಅನುಕೂಲ ಎಂದು ಅವರು ಆಶಯ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X