ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್‌ ದಾಖಲೆಗೆ ‘ಒನ್‌ ಮಿನಿಟ್‌ ಉಮಾ ’ ಸೇರ್ಪಡೆ

By Super
|
Google Oneindia Kannada News

ಗಿನ್ನಿಸ್‌ ದಾಖಲೆಗೆ 'ಒನ್‌ ಮಿನಿಟ್‌ ಉಮಾ " ಸೇರ್ಪಡೆ ಇದರ ಜೊತೆಗೆ ಉಮಾ ತಮ್ಮದೇ ಹಿಂದಿನ ಕೆಲವು ದಾಖಲೆಗಳನ್ನು ಮುರಿದಿದ್ದಾರೆ

ಬೆಂಗಳೂರು : ಇಸ್ಕಾನ್‌ ಮಂದಿರದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಕೇಶ ವಿನ್ಯಾಸಕಿ ಉಮಾ ಜಯಕುಮಾರ್‌ ಒಂದು ನಿಮಿಷದಲ್ಲಿ 62 ಕಡ್ಡಿಗಳನ್ನು ಸಿಕ್ಕಿಸಿ(ಚಾಪ್‌ಸ್ಟಿಕ್‌) ಕೇಶ ವಿನ್ಯಾಸಮಾಡಿ ಗಿನ್ನಿಸ್‌ ದಾಖಲೆ ಮಾಡಿದ್ದಾರೆ.

ಈಗಾಗಲೇ 'ಒನ್‌ ಮಿನಿಟ್‌ ಉಮಾ " ಎಂದೇ ಜನಪ್ರಿಯವಾಗಿರುವ ಉಮಾ, ಅಭಿಮಾನಿಗಳ ಭಾರೀ ಕರತಾಡನ, ಮುಗಿಲು ಮುಟ್ಟುವ ಕೂಗು ಹಾಗೂ ಸಂತಸದ ಅಲೆಯಲ್ಲಿ ಶನಿವಾರ ಈ ಸಾಧನೆಗೆ ಒಡತಿಯಾದರು.

ಈ ಮೊದಲು ಸ್ಪೇನ್‌ ದೇಶದ ಡಿಡಾರ್ಡ್‌ ಎಂಬುವರು ಒಂದು ನಿಮಿಷಕ್ಕೆ 25 ಕಡ್ಡಿ ಸಿಕ್ಕಿಸಿ ಕೇಶ ವಿನ್ಯಾಸಮಾಡಿ ಈ ದಾಖಲೆ ನಿರ್ಮಿಸಿದ್ದರು. ಉಮಾ ಅವರು ಡಿಡಾರ್ಡ್‌ ಅವರ ದಾಖಲೆಯನ್ನು ಭಾರೀ ಪ್ರಮಾಣದಲ್ಲಿ ಹಿಂದಿಕ್ಕಿ, ಹೊಸ ದಾಖಲೆಗೆ ಸೇರ್ಪಡೆಯಾದರು.

ಇದರ ಜೊತೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 49 ಕಡ್ಡಿಗಳನ್ನು ಸಿಕ್ಕಿಸಿ(ಚಾಪ್‌ ಸ್ಟಿಕ್‌)ಕೇಶ ವಿನ್ಯಾಸ ಮಾಡುವ ಮೂಲಕ ಉಮಾ ಹೊಸ ಲಿಮ್ಕಾ ದಾಖಲೆ ಸಹ ಮಾಡಿದರು.

ಇಷ್ಟಲ್ಲದೇ ತಮ್ಮ ಹೆಸರಿನಲ್ಲಿ ಈ ಮೊದಲು ಇದ್ದ ಕೆಲವು ದಾಖಲೆಗಳನ್ನೂ ಉತ್ತಮಪಡಿಸಿದರು. ನಿಮಿಷಕ್ಕೆ 5 ಕಡೆ ರಕ್ತ ಬರದಂತೆ ಕಿವಿ ಚುಚ್ಚುವ ಮೂಲಕ ಮಾಡಿದ್ದ ಸಾಧನೆಯನ್ನು, ನಿಮಿಷಕ್ಕೆ 13ಕಡೆ ಚುಚ್ಚುವ ಮೂಲಕ ಉತ್ತಮಪಡಿಸಿದರು. 35 ಅಂಗುಲ ಉದ್ದ ಜಡೆಗೆ ಫ್ರೆಂಚ್‌ ರೋಲ್‌ ಕೇಶವಿನ್ಯಾಸ ಮಾಡುವ ಮೂಲಕ ದಾಖಲೆ ಮಾಡಿದ್ದ ಉಮಾ, 70 ಅಂಗುಲ ಉದ್ದದ ಜಡೆಗೆ ಕೇವಲ 13.4 ಕ್ಷಣದಲ್ಲಿ ಕೇಶವಿನ್ಯಾಸ ಮಾಡುವ ಮೂಲಕ ತಮ್ಮದೆ ದಾಖಲೆಯನ್ನು ಮುರಿದರು.(ಇನ್ಫೋ ವಾರ್ತೆ)

English summary
One minute Uma creates Guiness record
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X