ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ದೆಸೆಯಿಂದ ರಾಜ್ಯಕ್ಕೆ ವಿಲಾಸಿ ರೈಲು

By Staff
|
Google Oneindia Kannada News

ಭಾರತೀಯ ರೈಲ್ವೆ ದೆಸೆಯಿಂದ ರಾಜ್ಯಕ್ಕೆ ವಿಲಾಸಿ ರೈಲು
ಪ್ರಸಕ್ತ ಸಾಲಿನಲ್ಲಿ ಜಾಹೀರಾತಿನಿಂದ 50ಕೋಟಿ ರೂ. ಆದಾಯ - ಆರ್‌.ವೇಲು

ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ಕರ್ನಾಟಕದಲ್ಲಿ ಎರಡು ರಾಜಭೋಗಿ ರೈಲನ್ನು ಓಡಿಸುವ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗಿನ ಒಪ್ಪಂದಕ್ಕೆ ಸಹಿಹಾಕಿದೆ ಎಂದು ರಾಜ್ಯಸಭೆಯಲ್ಲಿ ರೈಲ್ವೇ ರಾಜ್ಯ ಸಚಿವ ಆರ್‌.ವೇಲು ತಿಳಿಸಿದ್ದಾರೆ.

ಶುಕ್ರವಾರ ರಾಜ್ಯ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಅವರು, ಪ್ರಸ್ತುತ ಡೆಕ್ಕನ್‌ ಓಡಿಸ್ಸಿ ಮತ್ತು ಗಾಲಿಯ ಮೇಲೆ ಅರಮನೆ ಎಂಬ ಎರಡು ವಿಲಾಸಿ ರೈಲುಗಳ ಸಂಚಾರ ಸೇವೆಯನ್ನು ನಡೆಸುತ್ತಿದೆ. ಭಾರತ ದರ್ಶನ, ಪ್ರವಾಸ, ಸಫಾರಿ ಮತ್ತಿತರ ಉದ್ದೇಶಗಳಿಗೆ ಈ ರೈಲುಗಳು ಬಳಕೆಯಾಗುತ್ತಿವೆ ಎಂದಿದ್ದಾರೆ.

ಭಾರತೀಯ ರೈಲ್ವೇ 2003-04ರಲ್ಲಿ 36,72ಕೋಟಿ, 2004-05ರಲ್ಲಿ 50.21ಕೋಟಿ ರೂ.ಗಳನ್ನು ವಾಣಿಜ್ಯ ಜಾಹೀರಾತುಗಳಿಂದ ಆದಾಯ ಗಳಿಸಿದೆ. ಪ್ರಿಲ್‌ 2001ರಿಂದ ಮೇ 2005ರೊಳಗೆ 780.50ಲಕ್ಷ ಟಿಕೇಟ್‌ ರಹಿತ ಪ್ರಯಾಣಿಕರನ್ನು ರೈಲ್ವೆ ಇಲಾಖೆ ಬಂಧಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X