ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕರ ಜಾತಕ ಪ್ರಯಾಣಿಕರ ಕೈಯಲ್ಲಿ...

By Staff
|
Google Oneindia Kannada News

ಆಟೋ ಚಾಲಕರ ಜಾತಕ ಪ್ರಯಾಣಿಕರ ಕೈಯಲ್ಲಿ...
ಲೈಸನ್ಸ್‌ ಡಿಸ್‌ಪ್ಲೇ ಸಿಸ್ಟಮ್‌ಗೆ ವಿಜಯಕುಮಾರ್‌ ಚಾಲನೆ

ಬೆಂಗಳೂರು : ನಗರ ವ್ಯಾಪ್ತಿಯ ಆಟೋಗಳಲ್ಲಿ ನೀವಿನ್ನು ನಿರಾತಂಕವಾಗಿ ಪ್ರಯಾಣ ಮಾಡಬಹುದು. ಆಟೋ ಚಾಲಕರ ಸಂಘ ಮತ್ತು ಪೊಲೀಸರು ಇಂತಹ ವಿನೂತನ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ಆಟೋ ನೋಂದಣಿಯ ವಿವರ, ಚಾಲಕನ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವಿವರಗಳು ಪ್ರಯಾಣಿಕರಿಗೆ ಗೋಚರಿಸುವಂತೆ ಪ್ರದರ್ಶನಗೊಳ್ಳಲಿವೆ. ಈ ವ್ಯವಸ್ಥೆಯಿಂದ ಆಟೋ ಚಾಲಕರ ಕಿರಿಕಿರಿ, ಅಸಭ್ಯ ವರ್ತನೆಯ ಬಗೆಗೆ ದೂರಲು ಪ್ರಯಾಣಿಕರಿಗೆ ಅವಕಾಶವಾಗಲಿದೆ.

ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ ನಗರದ ಯವನಿಕಾದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಡ್ರೆೃವಿಂಗ್‌ ಲೈಸನ್ಸ್‌ ಡಿಸ್‌ಪ್ಲೇ ಸಿಸ್ಟಮ್‌ನ್ನು ಪೊಲೀಸ್‌ ಆಯುಕ್ತ ಡಾ.ವಿಜಯಕುಮಾರ್‌ ಉದ್ಘಾಟಿಸಿದರು.

ಸಮಾರಂಭದಲ್ಲಿ ಡಿಸಿಪಿ ಎಂ.ಎ.ಸಲೀಂ, ಸಂಚಾರ ವಿಭಾಗದ ಡಿಸಿಪಿ ಬಸವರಾಜು ಮಾಲಗತ್ತಿ, ಆದರ್ಶ ಸಂಘದ ಅಧ್ಯಕ್ಷ ಎಂ.ಮಂಜುನಾಥ್‌ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X