ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗೆ ರಾಜ್ಯದಲ್ಲಿ 4, ಮಹಾರಾಷ್ಟ್ರದಲ್ಲಿ 400 ಬಲಿ?

By Staff
|
Google Oneindia Kannada News

ಮಳೆಗೆ ರಾಜ್ಯದಲ್ಲಿ 4, ಮಹಾರಾಷ್ಟ್ರದಲ್ಲಿ 400 ಬಲಿ?
ಮಹಾರಾಷ್ಟ್ರದಲ್ಲಿ ಮುಂದುವರಿದ ಮಹಾಮಳೆ...

ಬೆಂಗಳೂರು : ರಾಜ್ಯದಲ್ಲಿ ಮತ್ತೆ ನಾಲ್ವರು ವರುಣನ ಅರ್ಭಟಕ್ಕೆ ಬಲಿಯಾಗಿದ್ದಾರೆ. ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯ ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಗುಲ್ಪರ್ಗ ಜಿಲ್ಲೆಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಆದರೆ ಕೊಡಗಿನಲ್ಲಿ ಮಳೆ ಇಳಿಮುಖವಾಗಿದೆ.

ಮುಂಬೈ ವರದಿ : ಮಹಾರಾಷ್ಟ್ರದಲ್ಲಿ ಅತೀ ವೃಷ್ಟಿ ಮುಂದುವರಿದಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಿಂದ ದೇಶದ ವಿವಿಧೆಡೆಗಿರುವ ರೈಲು, ಬಸ್‌ ಮತ್ತು ವಿಮಾನ ಸಂಪರ್ಕ ಕಡಿತಗೊಂಡಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ದೇಶದ ವಾಣಿಜ್ಯ ರಾಜಧಾನಿ ಎರಡನೇ ದಿನವೂ ತೊಂದರೆ ಅನುಭವಿಸಬೇಕಾಯಿತು. ಇಡೀ ನಗರ ಜಲಾವೃತಗೊಂಡಿತ್ತು. ರಾಜ್ಯ ಕೊಂಕಣ ಪ್ರದೇಶದ ರತ್ನಾಗಿರಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರವಾಗಿದ್ದು, ಜನಜೀವನದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಿದೆ.

ಸಾರಿಗೆ ವ್ಯವಸ್ಥೆ ಹದಗೆಟ್ಟಿದ್ದರಿಂದ, ಕಳೆದ ಎರಡು ದಿನಗಳಿಂದ ಕಚೇರಿಗಳಿಗೆ ಹೋಗುವ ನೌಕರರೂ ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಮುತ್ತಮುತ್ತಲಿನ ಅನೇಕ ಅರೆಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಕಳೆದ 24 ಗಂಟೆಗಳಲ್ಲಿ ಸಾಂತಾಕ್ರೂಜ್‌ನಲ್ಲಿ 896 ಮಿಲಿ ಮೀಟರ್‌ ಮಳೆ ಬಿದ್ದರೆ, ಕೊಲಬಾದಲ್ಲಿ 57.1 ಮಿಲಿ ಮೀಟರ್‌ ದಾಖಲಾಗಿದೆ. ಹಲವೆಡೆ ಮನೆಗಳಲ್ಲೇ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಅಷ್ಟೇ ಅಲ್ಲದೇ ಮೊಬೈಲ್‌ ಮತ್ತು ಸ್ಥಿರ ದೂರವಾಣಿ ಸೇವೆಗೂ ಮಳೆಯು ಅಡ್ಡಿ ಉಂಟುಮಾಡಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X