ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರರ ವಿಆರ್‌ಎಲ್‌ ಟ್ರಾವಲ್ಸ್‌ಗೆ ಐಎಸ್‌ಓ ಮಾನ್ಯತೆ

By Staff
|
Google Oneindia Kannada News

ಸಂಕೇಶ್ವರರ ವಿಆರ್‌ಎಲ್‌ ಟ್ರಾವಲ್ಸ್‌ಗೆ ಐಎಸ್‌ಓ ಮಾನ್ಯತೆ
ಆಂಧ್ರ, ತಮಿಳುನಾಡು ಮತ್ತು ಕೇರಳಕ್ಕೂ ವಿಆರ್‌ಎಲ್‌ ಬಸ್‌ ಸೇವೆ

ಬೆಂಗಳೂರು : ಅತ್ಯುತ್ತಮ ಗುಣಮಟ್ಟದ ನಿರ್ವಹಣೆಗಾಗಿ ವಿಜಯಾನಂದ್‌ ಟ್ರಾವಲ್ಸ್‌ಗೆ ಐಎಸ್‌ಓ 9001 : 2000 ಮಾನ್ಯತೆ ಸಂದಿದೆ. ವಿಆರ್‌ಎಲ್‌ ಸಂಸ್ಥೆಯ ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಮತ್ತು ಮುಂಬಯಿ ಶಾಖೆಗಳಿಗೆ ಈ ಮಾನ್ಯತೆ ಲಭಿಸಿದೆ.

ವಿಆರ್‌ಎಲ್‌ ಟ್ರಾವಲ್ಸ್‌ , ದೇಶದ ಪ್ರತಿಷ್ಠಿತ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಾನಂದ ರೋಡ್‌ಲೈನ್ಸ್‌ನ ಅಂಗಸಂಸ್ಥೆಯಾಗಿದೆ. ನಿರ್ವಹಣೆಯಲ್ಲಿ ಹೊಂದಿರುವ ಗುಣಮಟ್ಟದ ಸಮಗ್ರ ಪರಿಶೀಲನೆ ನಡೆಸಿದ ಬ್ರಿಟಿಷ್‌ ಸ್ಟ್ಯಾಂಡರ್ಡ್‌ ಇನ್ಸ್‌ಟಿಟ್ಯೂಟ್‌(ಬಿಎಸ್‌ಐ) ಪ್ರಮಾಣೀಕರಿಸಿದೆ.

ಬಿಎಸ್‌ಐ ಮ್ಯಾನೇಜ್‌ಮೆಂಟ್‌ ಸಿಸ್ಟಮ್ಸ್‌ನ ವ್ಯವಸ್ಥಾಪಕ ಎಂ.ಎನ್‌.ಶ್ಯಾಮ್‌ ಅವರು, ವಿಆರ್‌ಎಲ್‌ನ ಮುಖ್ಯ ತಾಂತ್ರಿಕ ಅಧಿಕಾರಿ ರಮಾನಂದ್‌ ಭಟ್‌ ಅವರಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿಆರ್‌ಎಲ್‌ ಕಾರ್ಯ ನಿರ್ವವಹಣಾಧಿಕಾರಿ ಕೆ.ಎನ್‌.ಉಮೇಶ್‌, ವಿಜಯಾನಂದ್‌ ಟ್ರಾವಲ್ಸ್‌ನ ಎನ್‌.ವಿಜಯಕುಮಾರ್‌ ಉಪಸ್ಥಿತರಿದ್ದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ವಿಜಯಾನಂದ ಟ್ರಾವಲ್ಸ್‌ನ ಬಸ್‌ಗಳು 200ಕ್ಕೂ ಹೆಚ್ಚು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಸಂಸ್ಥೆಯು ಈ ಎರಡೂ ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲೂ ಸಂಸ್ಥೆಯ ಬಸ್‌ಗಳು ಸಂಚರಿಸಲಿವೆ ಎಂದು ಸಂಸ್ಥೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X