ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿಯಲ್ಲಿನ ಕಿಡಿಗೇಡಿ ಕೃತ್ಯಗಳ ತನಿಖೆಗೆ ಜಂಟಿ ಸಮಿತಿ

By Staff
|
Google Oneindia Kannada News

ಹಂಪಿಯಲ್ಲಿನ ಕಿಡಿಗೇಡಿ ಕೃತ್ಯಗಳ ತನಿಖೆಗೆ ಜಂಟಿ ಸಮಿತಿ
ಡಾ.ಚಿದಾನಂದಮೂರ್ತಿ ಅವರ ವರದಿ ಫಲಶ್ರುತಿ

ಬೆಂಗಳೂರು : ಇತಿಹಾಸ ಪ್ರಸಿದ್ಧ ಹಂಪಿಯ ಸುರಕ್ಷಿತ ಪ್ರದೇಶದಲ್ಲಿ ದರ್ಗಾ ನಿರ್ಮಿಸಲು ಕೆಲ ಕಿಡಿಗೇಡಿಗಳು ಯತ್ನಿಸಿರುವ ಬಗೆಗೆ ಉನ್ನತ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಕಂದಾಯ ಸಚಿವ ಎಂ.ಪಿ.ಪ್ರಕಾಶ್‌, ಇಲ್ಲಿ ದರ್ಗಾ ನಿರ್ಮಾಣ ಮತ್ತು ಇತರೆ ಅನೈತಿಕ ಚಟುವಟಿಕೆಗಳ ಬಗ್ಗೆ ದೂರುಗಳು ಬಂದಿವೆ. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಕಾರ್ಯದರ್ಶಿಗಳಿಗೆ ಜಂಟಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.

ಕಿಷ್ಕಿಂದೆ, ಕೃಷ್ಣ ಬಜಾರ್‌ ಸೇರಿದಂತೆ ಅನೇಕ ಪ್ರದೇಶಗಳು ಅತಿಕ್ರಮಣ ಆಗಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು 233 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು, ಈಗಾಗಲೇ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದೆ. ಡಾ.ಚಿದಾನಂದಮೂರ್ತಿ ಅವರಂತಹ ಸಂಶೋಧಕರು ಅತಿಕ್ರಮಣದ ಬಗ್ಗೆ ವರದಿ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಎಂ.ಪಿ.ಪ್ರಕಾಶ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X