ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲಿಯೇ 90 ಹೊಸ ನ್ಯಾಯಾಲಯ -ಪಾಟೀಲ್‌

By Staff
|
Google Oneindia Kannada News

ಸದ್ಯದಲ್ಲಿಯೇ 90 ಹೊಸ ನ್ಯಾಯಾಲಯ -ಪಾಟೀಲ್‌
ಅತೀ ಶೀಘ್ರದಲ್ಲಿ ನ್ಯಾಯಾಧೀಶರ ಹುದ್ದೆ ಭರ್ತಿ, ಹದಿನಾಲ್ಕು ಲಕ್ಷ ಪ್ರಕರಣಗಳ ವಿಚಾರಣೆ ಬಾಕಿ

ಬೆಂಗಳೂರು : ರಾಜ್ಯದ ವಿವಿಧ ಭಾಗಗಳಲ್ಲಿ 90 ಹೊಸ ನ್ಯಾಯಾಲಯಗಳನ್ನು ಅತಿ ಶೀಘ್ರವಾಗಿ ಆರಂಭಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳನ್ನು ಆರು ತಿಂಗಳೊಳಗೆ ಭರ್ತಿ ಮಾಡುವುದಾಗಿಯೂ ಹೇಳಿದರು.

ನ್ಯಾಯಾಧೀಶರನ್ನು ನೇಮಿಸುವ ಕಾರ್ಯವನ್ನು ಹೈಕೋರ್ಟ್‌ಗೆ ಬಿಟ್ಟು ಕೊಡಲಾಗಿದ್ದು, ನ್ಯಾಯಾಧೀಶರ ನೇಮಕಕ್ಕೆ ಅಗತ್ಯವಿರುವ ನಿಯಮಗಳ ತಿದ್ದುಪಡಿಯನ್ನು ಸರ್ಕಾರ ಕೈಗೊಳ್ಳಲಿದೆ. ರಾಜ್ಯದಲ್ಲಿ 14.50ಲಕ್ಷ ಪ್ರಕರಣಗಳು ವಿವಿಧ ನ್ಯಾಯಾಲಗಳಲ್ಲಿ ಬಾಕಿ ಉಳಿದಿವೆ ಎಂದು ಪಾಟೀಲ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X