ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಸಂಸ್ಥೆಗೆ ರಿಚ್‌ ಗಾರ್ನಿಕ್‌ರ ರಾಜೀನಾಮೆ

By Staff
|
Google Oneindia Kannada News

ವಿಪ್ರೋ ಸಂಸ್ಥೆಗೆ ರಿಚ್‌ ಗಾರ್ನಿಕ್‌ರ ರಾಜೀನಾಮೆ
ಅಮೆರಿಕಾದಲ್ಲಿ ವಿಪ್ರೋ ಸಂಸ್ಥೆಯ ಮಾರಾಟ ಮುಖ್ಯಸ್ಥರಾಗಿ ಪಿ.ಆರ್‌.ಚಂದ್ರಶೇಖರ್‌ ನೇಮಕ

ಬೆಂಗಳೂರು : ವಿಪ್ರೋ ಸಂಸ್ಥೆಯ ಅಮೆರಿಕಾದ ಮಾರಾಟ ಮುಖ್ಯಸ್ಥ ರಿಚ್‌ ಗಾರ್ನಿಕ್‌ ಅವರು ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಿಚ್‌ ಗಾರ್ನಿಕ್‌, ಸಂಸ್ಥೆಯ ಬೆಳವಣಿಗೆಯಲ್ಲಿ ನಾನೂ ಭಾಗಿಯಾಗಿರುವೆ ಎಂಬುದೇ ಹರ್ಷದ ಸಂಗತಿ. ಕಾರ್ಯ ನಿಮಿತ್ತ ನಾನು ನನ್ನ ಕುಟುಂಬದಿಂದ ದೂರ ಉಳಿಯ ಬೇಕಾಗಿತ್ತು. ಇನ್ನು ಮುಂದೆ ನಾನು ಕುಟುಂಬದ ಕಡೆಗೆ ಗಮನ ನೀಡಬೇಕು. ಇದೇ ಕಾರಣಕ್ಕಾಗಿ ಸಂಸ್ಥೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜಗಳಲ್ಲೊಂದಾದ ವಿಪ್ರೋ ಸಂಸ್ಥೆಯಿಂದ ಕಳೆದ ತಿಂಗಳಷ್ಟೇ ಉಪಾಧ್ಯಕ್ಷ ವಿವೇಕ್‌ ಪಾಲ್‌ ಹೊರಬಂದಿದ್ದರು. ವಿವೇಕ್‌ಪಾಲ್‌ ರಾಜೀನಾಮೆ ಬೆನ್ನಲ್ಲೇ ರಿಚ್‌ ಗಾರ್ನಿಕ್‌ ಕೂಡ ಸಂಸ್ಥೆ ತೊರೆದಿದ್ದಾರೆ. ಸಂಸ್ಥೆಯು ಇದೇ ಸಂದರ್ಭದಲ್ಲಿ ಪಿ.ಆರ್‌.ಚಂದ್ರಶೇಖರ್‌ ಅವರ ನೇಮಕಾತಿಯನ್ನೂ ಪ್ರಕಟಿಸಿದೆ.

ಪಿ.ಆರ್‌.ಚಂದ್ರಶೇಖರ್‌ ಇಲ್ಲಿಯವರೆಗೆ ಐರೋಪ್ಯರಾಷ್ಟ್ರಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಮುಂದೆ ಅವರು ಅಮೆರಿಕಾ ದೇಶದ ವಹಿವಾಟನ್ನೂ ನೋಡಿಕೊಳ್ಳಲಿದ್ದಾರೆ.

ರಿಚ್‌ ಗಾರ್ನಿಕ್‌ ಅವರ ಸೇವೆಯನ್ನು ಶ್ಲಾಘಿಸಿದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ರಿಚ್‌ ನೇತೃತ್ವದಲ್ಲಿ ಉತ್ತರ ಅಮೆರಿಕಾದಲ್ಲಿ ಉತ್ತಮ ವಹಿವಾಟು ಸಾಧ್ಯವಾಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ತರವಾದುದು ಎಂದು ಹೇಳಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X