ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ಬಗ್ಗೆ ಸದ್ಯಕ್ಕಂತೂ ಆತಂಕವಿಲ್ಲ - ಸಿಬಲ್‌

By Staff
|
Google Oneindia Kannada News

ಸುನಾಮಿ ಬಗ್ಗೆ ಸದ್ಯಕ್ಕಂತೂ ಆತಂಕವಿಲ್ಲ - ಸಿಬಲ್‌
ರಾಷ್ಟ್ರದ ನಾನಾ ಭಾಗಗಳಲ್ಲಿ ಭಾನುವಾರ ರಾತ್ರಿ ಕಂಪನ, ಜನರಲ್ಲಿ ಆತಂಕ

ನವದೆಹಲಿ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಭಾನುವಾರ(ಜು.24) ರಾತ್ರಿಭಾರೀ ಭೂಕಂಪನ ಉಂಟಾಗಿದೆ. ಆದರೆ ಸುನಾಮಿ ಬಗ್ಗೆ ಎಚ್ಚರಿಕೆ ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಕಪಿಲ್‌ ಸಿಬಲ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಳೆದ ಒಂದೂವರೆ ಗಂಟೆಯಲ್ಲಿ ಸಮುದ್ರದ ನೀರಿನ ಮಟ್ಟದಲ್ಲೇನೂ ಏರಿಕೆಯಾಗಿಲ್ಲ. ಆದ್ದರಿಂದ ಸುನಾಮಿ ಮುನ್ನೆಚ್ಚರಿಕೆ ನೀಡಲು ಯಾವುದೇ ಸಮರ್ಥನೆ ಇಲ್ಲ ಎಂದರು.

ಸರ್ಕಾರವು ಪರಿಸ್ಥಿತಿಯ ಮೇಲೆ ಪೂರ್ಣ ನಿಗಾವಹಿಸಿದೆ, ಹಾಗಾಗಿ ಯಾರೂ ಆತಂಕಪಡಬೇಕಾಗಿಲ್ಲ . ನೌಕಾದಳದ ಅಧಿಕಾರಿಗಳೊಂದಿಗೆ ಈ ಬಗ್ಗೆ ನಾವು ಮಾತನಾಡಿದ್ದೇವೆ. ಅವರೂ ಸಹ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ. ಅಂತಹ ತೊಂದರೆಗಳು ಎದುರಾಗುವ ಲಕ್ಷಣಗಳು ಕಂಡುಬಂದರೆ ನಾಗರಿಕರಿಗೆ ತಿಳಿಸಲಾಗುವುದು. ಸದ್ಯಕ್ಕಂತೂ ಯಾವುದೇ ಆತಂಕವಿಲ್ಲ ಎಂದು ಸಿಬಲ್‌ ಹೇಳಿದರು.

ಸುನಾಮಿ ಕುರಿತು ಥಾಯ್‌ಲ್ಯಾಂಡ್‌ ದೇಶ ತನ್ನ ನಾಗರಿಕರಿಗೆ ಮುನ್ನೆಚ್ಚರಿಕೆ ನೀಡಿದೆಯೆಂದ ಮಾತ್ರಕ್ಕೆ, ನಾವೂ ಮುನ್ನೆಚ್ಚರಿಕೆ ನೀಡಬೇಕು ಎಂದೇನಿಲ್ಲ ಎಂದು ಅವರು ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X