ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಧಕ ಡಾ.ಹರೀಶ್‌ಗೆ ಸಾವಿರ ಹೃದಯಗಳ ಕೃತಜ್ಞತೆ

By Staff
|
Google Oneindia Kannada News

ಸಾಧಕ ಡಾ.ಹರೀಶ್‌ಗೆ ಸಾವಿರ ಹೃದಯಗಳ ಕೃತಜ್ಞತೆ
ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಪರಿಣಿತ

ಮಂಗಳೂರು : ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಏಕಾಂಗಿಯಾಗಿ ಒಂದು ಸಾವಿರ ಹೃದಯಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾಧಕ ಮಂಗಳೂರಿನ ಡಾ.ಹರೀಶ್‌ ರಾಘವನ್‌.

ಇಲ್ಲಿನ ಎ.ಜೆ.ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ, ಮೆಡಿಕಲ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿಗೆ ಬರುವ ಮೊದಲು ಏಕಾಂಗಿಯಾಗಿ ಅವರು 700 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರು.

ಕಲ್ಕಾತ್ತಾದ ಬಿರ್ಲಾ ಹಾರ್ಟ್‌ ರಿಸರ್ಚ್‌ ಸೆಂಟರ್‌ನಲ್ಲಿ ಮತ್ತು ಬೆಂಗಳೂರಿನ ಮಲಿಪಾಲ ಹಾರ್ಟ್‌ ಫೌಂಡೇಶನ್‌ನಲ್ಲಿ ಅವರು ಕೆಲ ಕಾಲ ಸೇವೆ ಸಲ್ಲಿಸಿದ್ದಾರೆ. ಬೀಟಿಂಗ್‌ ಹಾರ್ಟ್‌ನ ಕರೋನರಿ ಧಮನಿಯ ಬೈಪಾಸ್‌ ಗ್ರಾಫ್ಟಿಂಗ್‌, ಅತೀ ಕ್ಲಿಷ್ಟದ ಹೃದಯಕವಾಟದ ಶಸ್ತ್ರಚಿಕಿತ್ಸೆ, ಹೃದಯದ ಗಡ್ಡೆಗಳ ಚಿಕಿತ್ಸೆ ಸೇರಿದಂತೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗಳನ್ನು ಸುಲಲಿತವಾಗಿ ನಿರ್ವಹಿಸುವಲ್ಲಿ ಅವರು ಪರಿಣಿತರು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X