• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧರಂ

By Staff
|

ಧರಂ Vs ಯಡಿಯೂರಪ್ಪ : ಕ್ರಿಕೆಟ್‌ ಪಂದ್ಯ ಡ್ರಾ

ಶಾಸಕರ ದಿನಾಚರಣೆಯಲ್ಲಿ ಕಲಾವಿದರನ್ನು ಮೀರಿಸಿದ ಜನನಾಯಕರು!

ಬೆಂಗಳೂರು : ಕಿವಿಗಳಿಗೆ ಇಂಪು ನೀಡುವ ಸಂಗೀತ, ಮಿಮಿಕ್ರಿ, ಮ್ಯಾಜಿಕ್‌ ಶೋ, ಹರಿಕಥೆ, ಯಕ್ಷಾಗಾನ, ಫ್ಯಾನ್ಸಿ ಡ್ರೆಸ್‌, ಸಮೂಹ ನೃತ್ಯ ಇವೆಲ್ಲ ಶನಿವಾರ ನಡೆದ ಶಾಸಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಂಡು ಬಂದವು.

ನಮ್ಮ ಜನಪ್ರತಿನಿಧಿಗಳ ಹೊಸ ವೇಷ , ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಹೊರಬಿತ್ತು. ಸದನದೊಳಗೆ ಕೈಕೈ ಮಿಲಾಯಿಸುವ ಆಡಳಿತ ಮತ್ತು ಪ್ರತಿಪಕ್ಷಗಳು ರಾಜಕೀಯ ಮರೆತು ಐದು ಗಂಟೆಗಳ ಕಾಲ ಹಾಡಿ ಕುಣಿದರು. ಜೊತೆಗೆ ನಲಿದರು. ರಾಜ್ಯಪಾಲ ಚತುರ್ವೇದಿ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕರ ಸಮೂಹ ‘ಜಯಭಾರತ ಜನನಿಯ ತನುಜಾತೆ’ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ವಿಧಾನ ಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌, ‘ಭೂಮಿ ತಬ್ಬಿದ್‌ ಮೋಡದಂತೆ’ ಎಂಬ ಹಾಡು ಗುನುಗಿದರು. ಜೋಕುಮಾರ ಸ್ವಾಮಿ ನಾಟಕದ ಮೂಲಕ ಸಚಿವ ಎಂ.ಪಿ.ಪ್ರಕಾಶ್‌, ಉಮಾಶ್ರೀ, ಕುಮಾರ್‌ ಬಂಗಾರಪ್ಪ, ಮುಖ್ಯಮಂತ್ರಿ ಚಂದ್ರು ಮಿಂಚಿದರು.

ಬಿ.ಸಿ.ಪಾಟೀಲ್‌ ಭೀಮನಾಗಿ, ನರೇಂದ್ರ ಬಾಬು ಎಚ್ಚೆಮ ನಾಯಕನಾಗಿ ವೇದಿಕೆಯ ಮೇಲೆ ಬಂದರು. ಸೀರೆ ಸುತ್ತಿಕೊಂಡು ವೇದಿಕೆ ಹತ್ತಿದ ವಾಟಾಳ್‌ ನಾಗರಾಜ್‌ ಹಾಸ್ಯ ಚಟಾಕಿ ಹಾರಿಸಿದರು. ಆಹಾರ ಸಚಿವ ಮಹಾದೇವ ಪ್ರಸಾದ್‌ ತಂಡ ಕಂಸಾಳೆ ತಾಳಕ್ಕೆ ಹೆಜ್ಜೆ ಹಾಕಿತು.

ವಿಧಾನ ಪರಿಷತ್‌ ಸದಸ್ಯ ಹಸನಬ್ಬ ಮ್ಯಾಜಿಕ್‌ ಹೆಸರಲ್ಲಿ ತಲೆ ಬಿಸಿ ಮಾಡಿದರು. ಶಾಸಕ ಯೋಗೀಶ್‌ಭಟ್‌ ನೇತೃತ್ವದಲ್ಲಿ ಯಕ್ಷಾಗಾನ ರಂಗೇರಿತ್ತು.

ಕ್ರಿಕೆಟ್‌ : ಮುಖ್ಯಮಂತ್ರಿ ಧರ್ಮ ಸಿಂಗ್‌ ಮತ್ತು ಯಡಿಯೂರಪ್ಪ ನಾಯಕತ್ವದ ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯ, ಮಳೆರಾಯನಿಂದಾಗಿ ಡ್ರಾ ಆಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧರ್ಮಸಿಂಗ್‌, ಎಚ್‌.ಕೆ.ಪಾಟೀಲ್‌, ಡಿ.ಕೆ.ಶಿವಕುಮಾರ್‌, ತೇಜಸ್ವಿನಿ ರಮೇಶ್‌ ಮತ್ತಿತರರು ಒಂದು ತಂಡದಲ್ಲಿ, ಯಡಿಯೂರಪ್ಪ, ಕುಮಾರಸ್ವಾಮಿ, ಸಿ.ಟಿ.ರವಿ, ಮುಖ್ಯಮಂತ್ರಿಚಂದ್ರು ಮತ್ತೊಂದು ತಂಡವನ್ನು ಪ್ರತಿನಿಧಿಸಿದ್ದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮಾಧ್ಯಮ ತಂಡ, ಶಾಸಕರ ತಂಡವನ್ನು 16ರನ್‌ಗಳಿಂದ ಸೋಲಿಸಿತು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more