ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌: ಶಾಸಕರನ್ನು ಮಣಿಸಿದ ಚಿತ್ರತಂಡ

By Staff
|
Google Oneindia Kannada News

ಕ್ರಿಕೆಟ್‌: ಶಾಸಕರನ್ನು ಮಣಿಸಿದ ಚಿತ್ರತಂಡ
ಶಾಸಕರ ದಿನಾಚರಣೆ ಹಿನ್ನೆಲೆ ಶಾಸಕರು ಸದನದಿಂದ ಕಂಠೀರವ ಕ್ರೀಡಾಂಗಣಕ್ಕೆ ಜಿಗಿದಿದ್ದರು. ಅಲ್ಲಿ ನೋಡಬೇಕಿತ್ತು ಆಟ...ತುಂಟಾಟ! ಕ್ರಿಕೆಟ್‌ನಲ್ಲಿ ನಟ ಶಿವರಾಜ್‌ಕುಮಾರ್‌ ರನ್‌ ಚೆಚ್ಚುತ್ತಿದ್ದಾರೆ, ರಕ್ಷಿತಾ ಮತ್ತು ರಾಧಿಕಾ ಸೀಟಿ ಹೊಡೆಯುತ್ತಿದ್ದರು!

ಬೆಂಗಳೂರು : ಜನಪ್ರತಿನಿಧಿಗಳಿಗಿಂತಲೂ ನಾವೇ ಒಂದು ಕೈ ಮುಂದೆ ಎಂಬುದನ್ನು ಸಿನಿಮಾ ತಾರೆಯಲು ಕ್ರಿಕೆಟ್‌ಪಂದ್ಯದಲ್ಲಿ ಶುಕ್ರವಾರ ಸಾಬೀತುಪಡಿಸಿದ್ದಾರೆ.

ಶಾಸಕರ ದಿನಾಚರಣೆಯ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಿನಿಮಾ ತಾರೆಯರು ಮತ್ತು ಶಾಸಕರ ನಡುವಿನ ಕ್ರಿಕೆಟ್‌ ಪಂದ್ಯ ಮೋಜಿನಿಂದ ಕೂಡಿತ್ತು. ಸಿನಿಮಾ ತಾರೆಯರ ತಂಡ ಶಾಸಕರ ತಂಡವನ್ನು 34 ರನ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಸಿನಿಮಾ ತಾರೆಯರ ತಂಡ, ನಿಗದಿತ 15 ಓವರುಗಳಲ್ಲಿ 127 ರನ್‌ ಗಳಿಸಿತು. ಗೆಲುವಿನ ಮೊತ್ತವನ್ನು ಬೆನ್ನತ್ತಿದ ಶಾಸಕರ ತಂಡ, 93ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು, 34 ರನ್‌ಗಳಿಂದ ಸೋಲನುಭವಿಸಿತು.

ವಿಜೇತ ಸಿನಿಮಾ ತಾರೆಯರ ತಂಡದ ಪರ ನಟ ಶಿವರಾಜ್‌ಕುಮಾರ್‌ ಗರಿಷ್ಠ ಸ್ಕೋರ್‌ ದಾಖಲಿಸಿದರು. ಸಿನಿಮಾ ತಾರೆಯರು ಆಟ ಆಡುವಾಗ ನಟಿ ಜಯಮಾಲಾ ಹುರುಪು ತುಂಬುತ್ತಿದ್ದರು. ಆದರೆ ಶಾಸಕರ ತಂಡಕ್ಕೆ ಉತ್ತೇಜನ ನೀಡುವವರು ಯಾರೂ ಇರಲಿಲ್ಲ. ನಟ, ಸಂಸದ ಅಂಬರೀಷ್‌ ಕೂಡ ಚಿತ್ರ ತಾರೆಯರ ತಂಡವನ್ನೇ ಪ್ರತಿನಿಧಿಸಿದರು.

ಆಟ-ಹುಡುಗಾಟ : ಜು.24ರ ಶನಿವಾರದ ಶಾಸಕರ ದಿನಾಚರಣೆ ಹಿನ್ನೆಲೆ ಜನಪ್ರತಿನಿಧಿಗಳ ವಿವಿಧ ಸ್ಪರ್ಧೆಗಳಲ್ಲಿ ಹುರುಪಿನಿಂದ ಭಾಗವಹಿಸಿದ್ದರು.

ಉಪಮುಖ್ಯಮಂತ್ರಿ ಸಿದ್ದರಾಮಯ, ಬಿಜೆಪಿಯ ಯಡಿಯೂರಪ್ಪ , ಉಮಾಶ್ರೀ, ಡಿ.ಕೆ.ಶಿವಕುಮಾರ್‌,
ವಿಮಲಾ ಗೌಡ, ಕುಮಾರ್‌ ಬಂಗಾರಪ್ಪ ಮತ್ತಿತರರು ಕೇಸರಿ ಬಣ್ಣದ ಟೀ ಶರ್ಟ್‌, ಅದೇ ಬಣ್ಣದ ಹ್ಯಾಟ್‌ ಹಾಗೂ ಬಿಳಿ ಬಣ್ಣದ ಪ್ಯಾಂಟ್‌ ತೊಟ್ಟು ವಿವಿಧ ಕ್ರೀಡೆಗಳಲ್ಲಿ ಗಮನ ಸೆಳೆದರು. ಮಾಜಿ ಸಭಾಪತಿ ರಮೇಶ್‌ಕುಮಾರ್‌ ಅವರ ಕೀಟಲೆ ‘ಕಾಮೆಂಟ್ರಿ’ ಕ್ರೀಡಾಕೂಟಕ್ಕೆ ಕಳೆ ನೀಡಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X