ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಹೋದರರೇ, ಆಸ್ತಿಯಲ್ಲಿ ನನಗೂ ಪಾಲಿದೆ’

By Staff
|
Google Oneindia Kannada News

‘ಸಹೋದರರೇ, ಆಸ್ತಿಯಲ್ಲಿ ನನಗೂ ಪಾಲಿದೆ’
ಆಸ್ತಿ ಮೇಲೆ ಹಿಂದೂ ಮಹಿಳೆಗೆ ಪೂರ್ಣ ಅಧಿಕಾರ - ಹೈಕೋರ್ಟ್‌

ಬೆಂಗಳೂರು : ಹಿಂದೂ ಉತ್ತರಾದಿತ್ವ ಕಾಯ್ದೆ 1956ರ ಅನುಸಾರ ಹಿಂದೂ ಮಹಿಳೆಯರು ಸ್ಥಿರಾಸ್ತಿ ಅಥವಾ ಚರಾಸ್ತಿಗಳ ಮೇಲೆ ಸ್ಪಷ್ಟ ಮಾಲೀಕತ್ವ ಹೊಂದಿರುತ್ತಾರೆ ಎಂದು ರಾಜ್ಯದ ಉಚ್ಚನ್ಯಾಯಾಲಯ ಸ್ಪಷ್ಟಪಡಿಸಿದೆ.

ಅರಸೀಕೆರೆ ಮೂಲದ ಮಹಿಳೆಯಾಬ್ಬರು ಪತಿಯ ಆಸ್ತಿಯಲ್ಲಿ ಪಾಲು ಕೇಳುವ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಹಿಂದೂ ಉತ್ತರಾದಿತ್ವ ಕಾಯ್ದೆಯ ಪರಿಚ್ಛೇದ 14(1) ಕುರಿತು ಈ ವ್ಯಾಖ್ಯಾನ ನೀಡಿದೆ.

ಅನುವಂಶೀಯ ಅಥವಾ ಸಂಬಂಧಿ ಅಥವಾ ಅನ್ಯರಿಂದ ಕೊಡುಗೆಯಾಗಿ ಬಂದದ್ದು ಅಥವಾ ಖರೀದಿ ... ಹೀಗೆ ಯಾವುದೇ ಮೂಲದಿಂದ ಬಂದಿರುವ ಆಸ್ತಿಗೆ, ಹಿಂದೂ ಮಹಿಳೆಯರನ್ನು ಯಾವುದೇ ಆಸ್ತಿಯ ಭಾಗಶಃ ಮಾಲೀಕರು ಎಂದಷ್ಟೇ ಗುರುತಿಸುವುದು ಸಲ್ಲದು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕೊಸರು : ನ್ಯಾಯಾಲಯದ ತೀರ್ಪು ಕೇಳಿ; ‘ನನಗೆ ಮದುವೆ ಮಾಡಿದ ಮಾತ್ರಕ್ಕೆ ನಿಮ್ಮ ಜವಬ್ದಾರಿ ಮುಗಿಯದು...ಅಣ್ಣ, ತಮ್ಮನಿಗೆ ಕೊಟ್ಟಂತೆಯೇ ನನಗೂ ಆಸ್ತಿಯಲ್ಲಿ ಭಾಗ ಕೊಡಿ’ ಎನ್ನುವ ಮನೆಮಗಳ ಧ್ವನಿ ಸ್ವಲ್ಪ ಜಾಸ್ತಿಯಾಗಬಹುದು.

(ಇನ್ಫೋ ವಾರ್ತೆ)

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಭಾಗ ಕೊಡಬೇಕೇ? ಬೇಡವೇ ? ಎರಡು ಸಾಲು ಬರೆಯಿರಿ...

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X