ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಮನೆ ವೀಕ್ಷಣೆಗೆ ಇನ್ನು ಮುಂದೆ ತೆರೆದ ಬಾಗಿಲು

By Staff
|
Google Oneindia Kannada News

ಅರಮನೆ ವೀಕ್ಷಣೆಗೆ ಇನ್ನು ಮುಂದೆ ತೆರೆದ ಬಾಗಿಲು
ವರ್ಷದೊಳಗೆ ಶ್ರೀಕಂಠ ದತ್ತ ಒಡೆಯರ್‌ ಅವರಿಂದ ಖಾಸಗಿ ಏರ್‌ಲೈನ್ಸ್‌

ಬೆಂಗಳೂರು : ನಗರದ ಅರಮನೆಯನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಸಾರ್ವಜನಿಕ ವೀಕ್ಷಣೆಗೆ ಮೊದಲ ಬಾರಿಗೆ ಮುಕ್ತಗೊಳಿಸಲಾಗುತ್ತಿದೆ.

ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, 1884ರಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಅರಮನೆಯ ಮುಕ್ತ ಪ್ರವೇಶಕ್ಕೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸದ್ಯದಲ್ಲಿಯೇ ಅಧಿಕೃತವಾಗಿ ಚಾಲನೆ ನೀಡುವರು ಎಂದರು.

ಊಟಿಯಲ್ಲಿನ ಪರ್ನಿಲ್‌ ಪ್ಯಾಲೇಸ್‌ ಮಾದರಿಯಲ್ಲಿಯೇ ಬೆಂಗಳೂರು ಅರಮನೆಯನ್ನು ಅಭಿವೃದ್ಧಿ ಪಡಿಸಿ, ಪ್ರವಾಸಿಗರ ವೀಕ್ಷಣೆ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ನೀಡಲಾಗುವುದು. ಅರಮನೆ ಪ್ರವೇಶಕ್ಕೆ ಮಕ್ಕಳಿಗೆ 50, ದೊಡ್ಡವರಿಗೆ 100 ಮತ್ತು ಸಂಘ ಸಂಸ್ಥೆಗಳಿಗೆ 200ರೂ. ನಿಗದಿಪಡಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಂಗವಿಕಲರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ ಎಂದರು.

ಏರ್‌ಲೈನ್ಸ್‌ : ವಿಮಾನಯಾನ ಕ್ಷೇತ್ರಕ್ಕೆ ಮುಂದಿನ ಎಂಟು-ಹತ್ತು ತಿಂಗಳುಗಳಲ್ಲಿ ತಾವು ಪ್ರವೇಶಿಸುತ್ತಿರುವುದಾಗಿ ಒಡೆಯರ್‌ ಈ ಸಂದರ್ಭದಲ್ಲಿ ಹೇಳಿದರು.

ಇದಕ್ಕೆ ನನ್ನಲ್ಲಿ ಸ್ವಲ್ಪ ಪ್ರಮಾಣದ ಬಂಡವಾಳವಿದ್ದು, ಉಳಿದ ಬಂಡವಾಳವನ್ನು ದುಬೈ ಮತ್ತು ಹಾಂಗ್‌ಕಾಂಗ್‌ನಲ್ಲಿರುವ ನನ್ನ ಗೆಳೆಯರು ಹೂಡಲಿದ್ದಾರೆ. ದಕ್ಷಿಣ ಭಾರತದಲ್ಲಿ ಬೆಳೆಯುತ್ತಿರುವ ಮಾಹಿತಿ-ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ದಕ್ಷಿಣದ ರಾಜ್ಯಗಳಿಗೆ ಮಾತ್ರ ವಿಮಾನಯಾನ ಸೀಮಿತವಾಗಲಿದೆ ಎಂದು ಒಡೆಯರ್‌ ಹೇಳಿದರು.

(ಏಜನ್ಸೀಸ್‌)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X