ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಂಟ್‌ ಜಾನ್ಸ್‌ ಕಾಲೇಜಿನಲ್ಲಿ ಸರ್ಕಾರಿ ಸೀಟಿಲ್ಲ!?

By Staff
|
Google Oneindia Kannada News

ಸೇಂಟ್‌ ಜಾನ್ಸ್‌ ಕಾಲೇಜಿನಲ್ಲಿ ಸರ್ಕಾರಿ ಸೀಟಿಲ್ಲ!?
2005-06ನೇ ಸಾಲಿಗೆ ಅನ್ವಯವಾಗುವಂತೆ ಸು.ಕೋರ್ಟ್‌ ಆದೇಶ

ನವದೆಹಲಿ : ಪದವಿ, ನರ್ಸಿಂಗ್‌ ಹಾಗೂ ಸೂಪರ್‌ ಸ್ಪೆಷಾಲಿಟಿ ಕೋರ್ಸುಗಳಲ್ಲಿನ ಎಲ್ಲ ಸೀಟುಗಳನ್ನು ತಾನೇ ಭರ್ತಿ ಮಾಡಿಕೊಳ್ಳಲು ಬೆಂಗಳೂರಿನ ಸೇಂಟ್‌ ಜಾನ್ಸ್‌ ವೈದ್ಯಕೀಯ ಕಾಲೇಜಿಗೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.

ಈ ಕುರಿತು ಕಾಲೇಜು ಆಡಳಿತ ಮಂಡಳಿ ಅರ್ಜಿಯನ್ನು ಸಲ್ಲಿಸಿತ್ತು. ನ್ಯಾಯಮೂರ್ತಿ ವೈ.ಕೆ.ಸಭರ್‌ವಾಲ್‌, ನ್ಯಾಯಮೂರ್ತಿ ಡಿ.ಎಂ.ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ಪರಿಶೀಲಿಸಿ, ಆದೇಶ ನೀಡಿದೆ.

ಈ ನಿಯಮವು 2005-06ನೇ ಸಾಲಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ವೃತ್ತಿ ಶಿಕ್ಷಣ ಕಾಲೇಜುಗಳ ಪ್ರವೇಶ ಸಂಬಂಧ ಇರುವ, ಮುಖ್ಯ ಪ್ರಕರಣದ ವಿಚಾರಣೆ ನಡೆಸುತ್ತಿರುವ ಏಳು ಜನ ನ್ಯಾಮೂರ್ತಿಗಳ ಪೀಠವು ತನ್ನ ಆದೇಶ ನೀಡುವವರೆಗೂ ಇದು ಜಾರಿಯಲ್ಲಿರುತ್ತದೆ.

ಕಳೆದ ವರ್ಷವೂ ತನ್ನ ಎಲ್ಲ ಸೀಟುಗಳನ್ನು ಭರ್ತಿ ಮಾಡಿಕೊಳ್ಳುವ ಅಧಿಕಾರವನ್ನು ಸೇಂಟ್‌ ಜಾನ್ಸ್‌ ಕಾಲೇಜು ಸುಪ್ರೀಮ್‌ ಕೋರ್ಟ್‌ನಿಂದ ಪಡೆದಿತ್ತು. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ತನ್ನದೇ ನೀತಿಗಳನ್ನು ಸಂಸ್ಥೆ , ಸುಮಾರು 45 ವರ್ಷಗಳಿಂದ ಅನುಸರಿಸುತ್ತಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X