ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

213 ಉಪನ್ಯಾಸಕರ ಹುದ್ದೆಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

By Staff
|
Google Oneindia Kannada News

213 ಉಪನ್ಯಾಸಕರ ಹುದ್ದೆಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ
ಎನ್‌ಇಟಿ ಪಾಸಾದವರ ಮತ್ತು ಪಾಸಾಗದವರ ಗೋಳು...

ಬೆಂಗಳೂರು : ಕರ್ನಾಟಕ ರಾಜ್ಯ ಸಾರ್ವಜನಿಕ ಸೇವಾ ಆಯೋಗವು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಕನ್ನಡ, ಇಂಗ್ಲಿಷ್‌, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯ, ರಾಸಾಯನ ಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್‌ ಸೈನ್ಸ್‌, ಮನೋವಿಜ್ಞಾನ, ಭೌತಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಮೈಕ್ರೋಬೈಲಾಜಿ, ಪತ್ರಿಕೋದ್ಯಮ, ಬಯೋಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ 213 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು, ಗುಲ್ಬರ್ಗ, ಬೆಳಗಾವಿ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಸಾರ್ವಜನಿಕ ಸೇವಾ ಆಯೋಗ(ಕೆಪಿಎಸ್‌ಸಿ)ದ ಕಚೇರಿಗಳಲ್ಲಿ ಅಗಸ್ಟ್‌ 12ರಿಂದ ಅರ್ಜಿ ದೊರೆಯಲಿವೆ. ಆಗಸ್ಟ್‌ 20 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎನ್‌ಇಟಿ ಪಡೆದವರ ಗೋಳು : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧಿಸಲು ಎನ್‌ಇಟಿ ಪಾಸಾಗಿರಬೇಕು ಎಂದು ಯುಜಿಸಿ ಮಾರ್ಗಸೂಚಿ ಸ್ಪಷ್ಟಪಡಿಸಿದೆ. ಆದರೆ ಎನ್‌ಇಟಿ ಪಾಸಾಗದ ಅರೆಕಾಲಿಕ ಉಪನ್ಯಾಸಕರ ಪರವಾಗಿ ಜನಪ್ರತಿನಿಧಿಗಳು ಧ್ವನಿ ಎತ್ತಿರುವುದಕ್ಕೆ ಅತೃಪ್ತಿಗಳು ವ್ಯಕ್ತವಾಗಿವೆ.

ರಾಜ್ಯದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಎನ್‌ಇಟಿ ಪಾಸಾದ ಅರ್ಹ ಅಭ್ಯರ್ಥಿಗಳಿದ್ದಾರೆ. ಹಸಿದ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ಎಂಬಂತೆ ಬಹುವರ್ಷಗಳ ನಂತರ ಕೆಪಿಎಸ್‌ಸಿ 213ಉಪನ್ಯಾಸಕರನ್ನು ತುಂಬಲು ಮುಂದಾಗಿದೆ.

ಸ.ಪ್ರ.ದರ್ಜೆ ಕಾಲೇಜುಗಳಲ್ಲಿ ಎನ್‌ಇಟಿ ಅರ್ಹತೆ ಗಳಿಸದ ಅರೆಕಾಲಿಕ ಉಪನ್ಯಾಸಕರ ಮೇಲೆ ನ್ಯಾಯಾಲಯ ಕೆಂಗಣ್ಣು ಬೀರಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X