• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಠೇವಣಿದಾರರಿಗೆ ‘ವಿನಿ ವಿಂಕ್‌’ನಿಂದ ಪಂಗನಾಮ!?

By Staff
|

ಠೇವಣಿದಾರರಿಗೆ ‘ವಿನಿ ವಿಂಕ್‌’ನಿಂದ ಪಂಗನಾಮ!?

ನಗರದ ಮತ್ತೊಂದು ಗೋಪಾಲಪ್ಪನ ಕಂಪನಿಗೆ ಬೀಗ, ಅಧಿಕ ಬಡ್ಡಿ ಆಸೆಗೆ ಬಲಿಯಾಗಿ ಬೀದಿಗೆ ಬಿದ್ದವರ ಸಾಲಿಗೆ ನೀವೂ ಸೇರಬೇಡಿ...

ಬೆಂಗಳೂರು : ‘ಅತಿಯಾಸೆ ಗತಿಗೇಡು’ ಎಂಬಂತೆ ಗ್ರಾಹಕರ ತಲೆಗೆ ಮತ್ತೊಂದು ಚೆಂದದ ಟೋಪಿ ಬಿದ್ದಿದೆ! ರಾಷ್ಟ್ರೀಯ ಬ್ಯಾಂಕ್‌ಗಳನ್ನು ನಂಬದೇ ಅಧಿಕ ಬಡ್ಡಿ ಆಸೆಗೆ ಸಿಲುಕಿದ ಮಂದಿ ಆಕಾಶ ನೋಡುತ್ತಿದ್ದಾರೆ!

ಜನರನ್ನು ನಂಬಿಸಿ ಮೋಸ ಮಾಡುವ ಕಂಪನಿಗಳ ಪರಂಪರೆಯೇ ರಾಜ್ಯದಲ್ಲಿದೆ. ಆದರೂ ಜನರೂ ಪದೇಪದೇ ಮೋಸ ಹೋಗುತ್ತಿರುವುದು ಸೋಜಿಗ.

ಸುಮಾರು 50ಸಾವಿರಕ್ಕೂ ಅಧಿಕ ಗ್ರಾಹಕರಿಂದ ಕೋಟ್ಯಂತರ ರೂ.ಗಳಿಗೂ ಅಧಿಕ ಮೊತ್ತದ ಹಣ ಸಂಗ್ರಹಿಸಿದ ವಿನಿವಿಂಕ್‌ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಸ್ಥೆ, ತನ್ನ ಮುಖ್ಯ ಕಚೇರಿಗೆ ಬೀಗ ಜಡಿದಿರುವುದರಿಂದ ಗ್ರಾಹಕರು ಆತಂಕಗೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ನಗರದ ಸಜ್ಜನರಾವ್‌ ವೃತ್ತದ ಚಕ್ರವರ್ತಿ ಕಾಂಪ್ಲೆಕ್ಸ್‌ನಲ್ಲಿನ ವಿನಿವಿಂಗ್‌ ಮುಖ್ಯ ಕಚೇರಿಗೆ ಬೀಗ ಬಿದ್ದಿದೆ ಎಂಬ ಸಂಗತಿ ತಿಳಿದು ವಂಚನೆಗೆ ಒಳಗಾದ ಮಂದಿ ಗಾಭರಿಗೊಂಡಿದ್ದಾರೆ. ಅಧಿಕ ಬಡ್ಡಿ ಆಸೆಗೆ ಬಲಿಯಾದ ಮಂದಿ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ವಿನಿವಿಂಕ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ 46 ಪ್ರಕರಣಗಳು ದಾಖಲಾಗಿವೆ.

ಹಿನ್ನೆಲೆ : ನಾಲ್ಕು ವರ್ಷದ ಹಿಂದೆ ಗಿರಿನಗರದ ಶ್ರೀನಿವಾಸಶಾಸ್ತ್ರಿ ಮತ್ತು ಲೋಕೇಶ್‌ ಎನ್ನುವವರು ಆರಂಭಿಸಿದ ವಿನಿವಿಂಕ್‌ನ ಅಧಿಕ ಬಡ್ಡಿಯ ಆಸೆಗೆ ಸಿಲುಕಿದ ಗ್ರಾಹಕರು, ಪೈಪೋಟಿಗೆ ಬಿದ್ದವರಂತೆ ಠೇವಣಿ ಹೂಡಿದ್ದರು. ಆರಂಭದಲ್ಲಿ ಬಡ್ಡಿ ಹಣವನ್ನು ವ್ಯವಸ್ಥಿತವಾಗಿಯೇ ವಿನಿವಿಂಕ್‌ ವಿತರಿಸಿತ್ತು.

ಕಳೆದ ಮೂರುನಾಲ್ಕು ತಿಂಗಳ ಹಿಂದಷ್ಟೇ ‘ಹಾಯ್‌ ಬೆಂಗಳೂರ್‌’ ಪತ್ರಿಕೆ ವಿನಿವಿಂಕ್‌ ವಂಚನೆಯ ಬಗ್ಗೆ ಸವಿಸ್ತಾರ ವರದಿ ಪ್ರಕಟಿಸಿತ್ತು. ವಿನಿ ವಿಂಕ್‌ ಎಂಬ ಬ್ಲೇಡ್‌ ಕಂಪನಿ ಬಗ್ಗೆ ಠೇವಣಿದಾರರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೇ ವಿಧಾನ ಪರಿಷತ್ತಿನಲ್ಲಿ ವಿನಿವಿಂಕ್‌ ಕಾರ್ಯತಂತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ವಿನಿ ವಿಂಕ್‌ಗೆ ಹರಿದು ಬರುತ್ತಿದ್ದ ಹೂಡಿಕೆ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕುಸಿದಿದ್ದು, ಆಟ ಮುಗಿಸಿದಂತೆ ವಿನಿ ವಿಂಕ್‌ ಬಾಗಿಲು ಮುಚ್ಚಿದೆ.

ರಾಜಧಾನಿ ನಗರ ಮಾತ್ರವಲ್ಲದೇ ಮೈಸೂರು, ತುಮಕೂರು, ದಾವಣಗೆರೆ, ರಾಯಚೂರು, ಹಾಸನಗಳಲ್ಲಿ ಶಾಖೆ ತೆರೆದು, ಸಂಸ್ಥೆ ಜನರನ್ನು ವಂಚಿಸಿದೆ. ವಿನಿವಿಂಕ್‌ ವಿವಾಹ ವೇದಿಕೆ ಹೆಸರಲ್ಲಿ ಮತ್ತಷ್ಟು ಹಣ ಸಂಗ್ರಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸ್ವಯಂ ನಿವೃತ್ತಿ ಪಡೆದು ಬಂದ ಹಣ 7.5ಲಕ್ಷವನ್ನು ವಿನಿವಿಂಕ್‌ನಲ್ಲಿ ಠೇವಣಿಯಾಗಿಟ್ಟಿದ್ದ ಗ್ರಾಹಕರು ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more