• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮಿಶ್ರ ಸರ್ಕಾರದ ಮೇಲೆ ಖರ್ಗೆ ಪರಿಣಾಮ ಏನು?

By Staff
|

ಸಮ್ಮಿಶ್ರ ಸರ್ಕಾರದ ಮೇಲೆ ಖರ್ಗೆ ಪರಿಣಾಮ ಏನು?

ಸಮಸ್ಯೆ ಸವಾಲುಗಳ ಮಧ್ಯೆ ಖರ್ಗೆ ಅವರಿಗೆ ಅಗ್ನಿಪರೀಕ್ಷೆ , ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಖರ್ಗೆ ಇಂಗಿತ

  • (ನಮ್ಮ ಪ್ರತಿನಿಧಿಯಿಂದ)
  • Mallikarjun_khargeಬೆಂಗಳೂರು : ಸದ್ದಿಲ್ಲದೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನವನ್ನು ಜಲಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ತಮ್ಮದಾಗಿಸಿಕೊಂಡಿದ್ದಾರೆ.

    ಸೋನಿಯಾ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಖರ್ಗೆ ಅವರ ಮುಂದೆ ಸವಾಲುಗಳ ರಾಶಿಯೇ ಇದೆ. ಹಿಂದುಳಿದ ವರ್ಗವನ್ನು ಪ್ರತಿನಿಧಿಸುತ್ತಿರುವ ಖರ್ಗೆ ಅವರ ಆಯ್ಕೆಯಿಂದ ಕಾಂಗ್ರೆಸ್‌ಗೆ ಲಾಭವಾಗುವುದೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.

    ದಳದಲ್ಲಿನ ದೇವೇಗೌಡ, ಸಿದ್ದರಾಮಯ್ಯ, ಬಿಜೆಪಿಯಲ್ಲಿನ ಅನಂತಕುಮಾರ್‌, ಯಡಿಯೂರಪ್ಪ , ಸಮಾಜವಾದಿ ಪಕ್ಷದ ಬಂಗಾರಪ್ಪ ಅವರಂತಹ ನಾಯಕರಿಗೆ ತಕ್ಕ ಉತ್ತರಗಳನ್ನು ನೀಡಿ, ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಬೇಕಾದ ಸವಾಲು ಖರ್ಗೆ ಅವರ ಮುಂದಿದೆ.

    ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಜೆಡಿಎಸ್‌, ಖರ್ಗೆ ಧೋರಣೆಗಳನ್ನು ಕಾದುನೋಡುವುದಾಗಿ ಹೇಳಿದೆ. ದಿನೇದಿನೇ ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಪಕ್ಷವನ್ನು ಹಿಮ್ಮೆಟ್ಟಿಸುತ್ತಿರುವುದರಿಂದ, ಹೊಸ ಜನಾದೇಶಕ್ಕೆ ಪಕ್ಷವನ್ನು ಸಜ್ಜುಗೊಳಿಸುವ ಪರಿಸ್ಥಿತಿ ಬಂದರೂ ಅಚ್ಚರಿಯೇನಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

    ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಅವರ ಅತಿಯಾದ ಮಾತುಗಾರಿಕೆ ಎಷ್ಟೋ ಸಲ ಕಾಂಗ್ರೆಸ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಡುವೆ ಮೌನದ ಪ್ರತಿರೂಪದಂತಿರುವ ಖರ್ಗೆ ಆಯ್ಕೆ ಒಂದು ವಿಶೇಷ. ಬಹುಸಂಖ್ಯಾತ ಒಕ್ಕಲಿಗ ಮತ್ತು ಲಿಂಗಾಯಿತ ಮತಗಳನ್ನು ಕಸಿಯಲು ಖರ್ಗೆ ಬಳಸಬಹುದಾದ ತಂತ್ರಗಾರಿಕೆ ತೀವ್ರ ಕುತೂಹಲ ಮೂಡಿಸಿದೆ.

    ಸಮನ್ವಯ : ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಧರ್ಮಸಿಂಗ್‌ ರಾಜಕೀಯವಾಗಿ ಸಮಕಾಲೀನರು ಮತ್ತು ಸ್ನೇಹಿತರು. ಮಾತ್ರವಲ್ಲ ಅವರಿಬ್ಬರೂ ತಮ್ಮ ತಮ್ಮ ಕ್ಷೇತ್ರಗಳಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಧರ್ಮಸಿಂಗ್‌ ಜೇವರ್ಗಿ ಮತ್ತು ಖರ್ಗೆ ಗುರುಮಿಟಕಲ್‌ ಕ್ಷೇತ್ರದಿಂದ ಸತತ ಎಂಟನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು.

    ಖರ್ಗೆ ಅವರಿಗಿಂತ ಮೊದಲೇ ಧರ್ಮಸಿಂಗ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದಿತ್ತು. ಅದೇ ರೀತಿಯಲ್ಲೇ ಮುಖ್ಯಮಂತ್ರಿ ಸ್ಥಾನವೂ ಧರ್ಮಸಿಂಗ್‌ ಅವರಿಗೆ ಒಲಿಯಿತು. ಧರ್ಮಸಿಂಗ್‌ ಅಜಾತಶತ್ರು ಎಂದು ಹೆಸರು ಮಾಡಿದವರು. ಖರ್ಗೆ ಅಂತಹ ಬಿರುದು ಪಡೆಯದಿದ್ದರೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ನುರಿತ ರಾಜಕಾರಣಿ.

    ಪ್ರಸ್ತುತ ಧರಂ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವ ಖಾತೆ ವಹಿಸಿಕೊಂಡಿರುವ ಖರ್ಗೆ, ರಾಜ್ಯ ರಾಜಕಾರಣದ ಎಲ್ಲ ಮಜಲುಗಳನ್ನೂ ಬಲ್ಲವರು. ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಮಾಜಸೇವೆ ಮತ್ತು ಕಾರ್ಮಿಕ ಚಳವಳಿಯಲ್ಲಿ ತೊಡಗಿಕೊಂಡವರು. ಗುಲ್ಬರ್ಗಾ ನಗರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದವರೆಗೆ ನಡೆದುಬಂದ ದಾರಿ ಸುಲಭದ್ದೇನಲ್ಲ. ಇಡೀ ರಾಜಕೀಯ ಜೀವನದಲ್ಲಿ ಅವರು ವಿವಿಧ ಇಲಾಖೆಗಳ ಸಚಿವ ಮತ್ತು ವಿರೋಧ ಪಕ್ಷದ ನಾಯಕನಾಗಿ ಕೆಲಸ ನಿರ್ವಹಿಸಿದ್ದಾರೆ.

    ಖರ್ಗೆ ರಾಜಕೀಯ ಜೀವನದ ಇಣುಕು ನೋಟ :

    1969 : ಗುಲ್ಬರ್ಗ ನಗರ ಕಾಂಗ್ರೆಸ್‌ ಅಧ್ಯಕ್ಷ

    1972 : ಮೊದಲ ಬಾರಿಗೆ ಗುರುಮಿಟಕಲ್‌ ವಿಧಾನಸಭಾಕ್ಷೇತ್ರದಿಂದ ಆಯ್ಕೆ

    1972-75 : ಬೆಂಗಳೂರು ಕೃಷಿ ವಿವಿ ಸದಸ್ಯ

    1976 : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ(ದೇವರಾಜ್‌ ಅರಸ್‌ ಸರ್ಕಾರ)

    1979 : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಸಚಿವ

    1980 : ಕಂದಾಯ ಸಚಿವ(ಗುಂಡೂರಾವ್‌ ಸರ್ಕಾರ)

    1983 : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಾರ್ಯದರ್ಶಿ

    1990 : ಕಂದಾಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಸಚಿವ(ಬಂಗಾರಪ್ಪ ಸರ್ಕಾರ)

    1992 : ಸಹಕಾರ ಖಾತೆ

    1999 : ಗೃಹ ಮತ್ತು ಸಣ್ಣ ನೀರಾವರಿ(ಎಸ್‌.ಎಂ.ಕೃಷ್ಣ ಸರ್ಕಾರ)

    2004 : ಜಲಸಂಪನ್ಮೂಲ ಮತ್ತು ಸಾರಿಗೆ ಸಚಿವ(ಧರ್ಮಸಿಂಗ್‌ ಸರ್ಕಾರ)

    2005 : ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ

    ಮುಖಪುಟ / ಧರ್ಮ-ಕಾರಣ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more