ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ-ಗುಲ್ಬರ್ಗದಲ್ಲಿ ಸದ್ಯದಲ್ಲಿಯೇ ಸಂಚಾರಿ ಪೀಠ

By Staff
|
Google Oneindia Kannada News

ಧಾರವಾಡ-ಗುಲ್ಬರ್ಗದಲ್ಲಿ ಸದ್ಯದಲ್ಲಿಯೇ ಸಂಚಾರಿ ಪೀಠ
ಉತ್ತರ ಕರ್ನಾಟಕದ ಜನರ 40ವರ್ಷಗಳ ನನಸಾದ ಕನಸು, ರಾಜ್ಯೋತ್ಸವಕ್ಕೆ ಸರ್ಕಾರದ ಕೊಡುಗೆ

ಬೆಂಗಳೂರು : ಧಾರವಾಡ ಮತ್ತು ಗುಲ್ಬರ್ಗಗಳಲ್ಲಿ ಆಗಸ್ಟ್‌ ಮೊದಲ ವಾರದಲ್ಲಿ ಸಂಚಾರಿ ಪೀಠ ಸ್ಥಾಪನೆಯ ಶಂಕು ಸ್ಥಾಪನೆಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ಕೆ. ಸೋಧಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರಿ ಪೀಠಗಳ ಶಿಲಾನ್ಯಾಸವನ್ನು ಆಷಾಢ ಕಳೆದ ನಂತರ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಸಂಚಾರಿ ಪೀಠ ಸ್ಥಾಪನೆಗೆ 20ಕೋಟಿ ರೂ ಹಣ ಮೀಸಲಿಡಲಾಗಿದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗುವುದು ಎಂದರು.

ಸಂಚಾರಿ ಪೀಠಗಳಿಗಾಗಿ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಹಾಲಿ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯಶಿಲ್ಪಿ ಜತೆ ಚರ್ಚೆ ನಡೆಸಲಾಗಿದೆ. ಹೊಸ ಕಟ್ಟಡಗಳ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪ್ರಸಾಪನೆ ಸಲ್ಲಿಸಿರುವುದಾಗಿ ಧರ್ಮಸಿಂಗ್‌ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X