ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಾಯ್‌’ ಅಬ್ಬರ, ‘ಅಗ್ನಿ’ಯ ನಡುವೆ‘ಲಂಕೇಶ್‌’!

By Staff
|
Google Oneindia Kannada News

‘ಹಾಯ್‌’ ಅಬ್ಬರ, ‘ಅಗ್ನಿ’ಯ ನಡುವೆ‘ಲಂಕೇಶ್‌’!
26ನೇ ವಸಂತಕ್ಕೆ ‘ಲಂಕೇಶ್‌ ಪತ್ರಿಕೆ’ ಪಾದಾರ್ಪಣೆ

ಬೆಂಗಳೂರು : ನಾಡಿನ ಮಹತ್ವದ ಸಾಪ್ತಾಹಿಕ ‘ಲಂಕೇಶ್‌ ಪತ್ರಿಕೆ’ 26ನೇ ವರ್ಷಕ್ಕೆ ಕಾಲಿಟ್ಟಿದೆ. ಸಾಹಿತಿ ಮತ್ತು ಪತ್ರಕರ್ತ ಲಂಕೇಶ್‌ರ ಹಂಬಲಗಳು, ಕನಸುಗಳು, ಕನವರಿಕೆಗಳು ಪತ್ರಿಕೆಯ ಮೂಲಕ ಮುಂದುವರೆದಿವೆ.

ಈ ಸಂದರ್ಭದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್‌, ಲಂಕೇಶ್‌ ಪತ್ರಿಕೆ ಓದದಿದ್ದರೆ ಪತ್ರಿಕೆಗಳ ಓದು ಪೂರ್ಣವಾಗುತ್ತಿರಲಿಲ್ಲ. ಆ ಮಟ್ಟಿಗೆ ಪತ್ರಿಕೆ ನನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಲಂಕೇಶ್‌ ಪತ್ರಿಕೆ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಧರ್ಮಸಿಂಗ್‌ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ವಾರ್ತಾ ಸಚಿವ ಶಿವರಾಂ, ನಟ ರವಿಚಂದ್ರನ್‌, ರಾಜ್ಯ ಸಚಿವ ಎಂ.ವಿ.ರಾಜಶೇಖರನ್‌, ಪತ್ರಿಕೆಯ ಸಂಪಾದಕ ಇಂದ್ರಜಿತ್‌ ಉಪಸ್ಥಿತರಿದ್ದರು.

ಒಬ್ಬ ವ್ಯಕ್ತಿಯಾಗಿರದೇ ಒಂದು ಸಂಸ್ಥೆಯಾಗಿ, ಜನಾಭಿಪ್ರಾಯ ಮೂಡಿಸುವಲ್ಲಿ ಲಂಕೇಶ್‌ ನೀಡಿದ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ದಿಟ್ಟ ಪತ್ರಿಕೋದ್ಯಮಕ್ಕೆ ಚಾಲನೆ ನೀಡಿದ ಪಿ.ಲಂಕೇಶ್‌ ಅವರ ನಿಧನದ ನಂತರ ಅವರ ಪುತ್ರರಾದ ಇಂದ್ರಜಿತ್‌ ಮತ್ತು ಪುತ್ರಿ ಗೌರಿ ಲಂಕೇಶ್‌ ನಡುವಿನ ಮನಸ್ತಾಪಗಳಿಂದ ಪತ್ರಿಕೆ ಈಗ ಮುರಿದ ಮನೆಯಾಗಿದೆ. ಹಳೆಯ ಪತ್ರಿಕೆಯನ್ನು ಇಂದ್ರಜಿತ್‌ ನಿರ್ವಹಣೆ ಮಾಡುತ್ತಿದ್ದಾರೆ. ಲಂಕೇಶ್‌ ಹೆಸರಿನ ಮತ್ತೊಂದು ಪತ್ರಿಕೆಯನ್ನು ಗೌರಿ ಲಂಕೇಶ್‌ ಆರಂಭಿಸಿದ್ದಾರೆ.

ಕನ್ನಡದ ಟ್ಯಾಬ್ಲಾಯ್ಡ್‌ ಪತ್ರಿಕೋದ್ಯಮದಲ್ಲಿ ಲಂಕೇಶ್‌ ನಿಧನದ ನಂತರ ಸ್ಪರ್ಧೆ ಕಡಿಮೆಯಾಗಿದ್ದು, ರವಿಬೆಳಗೆರೆ ಸಂಪಾದಕತ್ವದ ‘ಹಾಯ್‌ ಬೆಂಗಳೂರು’ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಶ್ರೀಧರ್‌ ಸಂಪಾದಕತ್ವದ ‘ಅಗ್ನಿ’ ಪ್ರಜ್ಞಾವಂತರ ಗಮನ ಸೆಳೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X