ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಮೈಸೂರಿಗೆ 2 ತಾಸಲ್ಲಿ ಪ್ರಯಾಣ!

By Staff
|
Google Oneindia Kannada News

ಬೆಂಗಳೂರಿನಿಂದ ಮೈಸೂರಿಗೆ 2 ತಾಸಲ್ಲಿ ಪ್ರಯಾಣ!
ಮದ್ದೂರು-ಮೈಸೂರು ನಡುವಿನ ಹೆದ್ದಾರಿ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣ

ಬೆಂಗಳೂರು : ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೊಂದು ಸಿಹಿಸುದ್ದಿ. ಮದ್ದೂರು ಮತ್ತು ಮೈಸೂರು ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ.

ಈ ಹೆದ್ದಾರಿಯಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ಕೇವಲ ಎರಡು ಗಂಟೆಯಲ್ಲಿ ತೆರಳಬಹುದು. ಅವಧಿಗಿಂತಲೂ ಐದು ತಿಂಗಳ ಮೊದಲೇ ಕಾಮಗಾರಿ ಮುಕ್ತಾಯವಾಗುತ್ತಿರುವುದು ಮತ್ತೊಂದು ವಿಶೇಷ.

ಜಾಗತಿಕ ಗುಣಮಟ್ಟದ ಹೆದ್ದಾರಿ ಇದಾಗಿದ್ದು, ಗಂಟೆಗೆ 100ಕಿ.ಮೀ ವೇಗದಲ್ಲಿ ವಾಹನಗಳು ಸಾಗಲು ಪೂರಕವಾಗುವಂತಹ ವಿನ್ಯಾಸವನ್ನು ರೂಪಿಸಲಾಗಿದೆ ಎಂದು ರಸ್ತೆ ನಿರ್ಮಾಣ ಸಂಸ್ಥೆ ಸೋಮಾ ಕಂಪನಿಯ ನಿರ್ದೇಶಕ ಅಂಕಿನೀಡು ಮಗಂತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

116.2ಕೋಟಿ ರೂ. ವೆಚ್ಚದ ಈ ಕಾಮಗಾರಿಯಿಂದ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸುಖಕರವಾಗಲಿದೆ. ಬಾಬು ರಾಯನಕೊಪ್ಪಲು ಮತ್ತು ಮೈಸೂರು ರಸ್ತೆ ಕಾಮಗಾರಿ ಅಕ್ಟೋಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X