• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೀಡ್ಸ್‌ ಆಫ್‌ ಚೇಂಜ್‌’ ಎಂಬ ಚಿತ್ರತರಂಗಗಳು

By Staff
|

‘ಸೀಡ್ಸ್‌ ಆಫ್‌ ಚೇಂಜ್‌’ ಎಂಬ ಚಿತ್ರತರಂಗಗಳು

ನೆಲ-ಜಲ, ಶಾಂತಿ-ನೆಮ್ಮದಿ ಬಗೆಗೆ ಜಾಗೃತಿ ಮೂಡಿಸಿ, ಮಾನವ ಕುಲದ ಭವಿಷ್ಯದ ಬಗ್ಗೆ ಚಿಂತನೆ ನಡೆಸಲು ಪ್ರೇರಣೆ ನೀಡುವಂತಹ ಚಿತ್ರಪ್ರದರ್ಶನ ಈಗ ನಗರದಲ್ಲಿ ಲಭ್ಯ.

ಬೆಂಗಳೂರು : ಈ ಜಗತ್ತಿನ ಸಮಸ್ಯೆಗಳು ಎಷ್ಟೇ ಜಟಿಲವಾಗಿ ಕಂಡರೂ ಇದಕ್ಕೆ ನಾವೇ ಕಾರಣಕರ್ತರೆಂಬುದನ್ನು ಮರೆಯಬಾರದು. ಈ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ನಮ್ಮಲ್ಲಿಯೇ ಇದೆ ಎನ್ನುವ ಅಂಶವನ್ನು ಮನನ ಮಾಡುವ ‘ಸೀಡ್ಸ್‌ ಆಫ್‌ ಚೇಂಜ್‌ : ದಿ ಆರ್ಥ್‌ ಚಾರ್ಟರ್‌ ಪೊಟೆನ್ಷಿಯಲ್‌’ ಎಂಬ ಚಿತ್ರಪ್ರದರ್ಶನ ಶುಕ್ರವಾರ ಆರಂಭಗೊಳ್ಳುತ್ತಿದೆ.

ಯುನೆಸ್ಕೋದ ಸಹಕಾರದೊಂದಿಗೆ ಭಾರತದ ಸೋಕಾ ಗಕ್ಕಾಯಿ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಆಯೋಜಿಸಿರುವ ಪ್ರದರ್ಶನವನ್ನು ಶುಕ್ರವಾರ ಸಂಜೆ ವೆಂಕಟಪ್ಪ ಚಿತ್ರಕಲಾ ಶಾಲೆಯಲ್ಲಿ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಉದ್ಘಾಟಿಸುವರು.

ಪರಿಸರವಾದಿ ಸುರೇಶ್‌ ಹೆಬ್ಳೀಗರ್‌ ಹಾಗೂ ಜನಾಗ್ರಹ ಸಂಸ್ಥೆಯ ರಮೇಶ್‌ ರಾಮನಾಥನ್‌ ಮತ್ತಿತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಹಸಿರು ವೃದ್ಧಿ, ಮಳೆ ನೀರು ಸಂಗ್ರಹ, ಬಡತನ, ಅಸಮಾನತೆ, ತಾಂತ್ರಿಕ ಪ್ರಗತಿಯಿಂದ ಪರಿಸರದ ಮೇಲಾಗಿರುವ ದುಷ್ಪರಿಣಾಮ, ವಿಶ್ವಶಾಂತಿ, ಜಾಗತಿಕ ಮಾನವ ಹಕ್ಕು, ಆರ್ಥಿಕ ನ್ಯಾಯ, ಶಾಂತಿಯುತ ಸಮಾಜದ ಪರಿಕಲ್ಪನೆ ಮತ್ತಿತರ ವಸ್ತುಗಳನ್ನು ಪ್ರದರ್ಶನ ಬಿಂಬಿಸಲಿದೆ.

‘ತಾಂತ್ರಿಕ ಸುಧಾರಣೆ ಜೊತೆಗೆ ಮಾನವನ ಆಂತರಿಕ ಪರಿವರ್ತನೆ ಮಾತ್ರ ನೈಸರ್ಗಿಕ ಜಗತ್ತು ಮತ್ತು ಜೀವ ಇವುಗಳನ್ನು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ. ಅಲ್ಲದೇ ಮಾನವನ ಹಣೆಬರಹ ಬದಲಿಸುವ ಶಕ್ತಿ ನಮ್ಮ ಜೀವನ ಮೌಲ್ಯದಲ್ಲಿದೆ’ ಎನ್ನುವ ಕಾರ್ಯಕ್ರಮದ ಸಂಘಟಕರಾದ ಸೋಕಾ ಗಕ್ಕಾಯಿ ಅಧ್ಯಕ್ಷರಾದ ಡಾ.ದೈಸಕು ಇಕೇದಾ, ಪ್ರದರ್ಶನದ ಪ್ರಯೋಜನ ಪಡೆಯಲು ಕೋರಿದ್ದಾರೆ.

ಮನತಟ್ಟುವ ಚಿತ್ರಗಳು : ಗ್ರೀನ್‌ಬೆಲ್ಟ್‌ ಚಳವಳಿ ಮೂಲಕ ಅಸಂಖ್ಯಾತ ಮಹಿಳೆಯರನ್ನು ಪ್ರೋತ್ಸಾಹಿಸಿ, 20ದಶಲಕ್ಷಕ್ಕೂ ಅಧಿಕ ಸಸಿ ನೆಡುವ ಕಾರ್ಯಕ್ರಮ ಆರಂಭಿಸಿದ ಕೀನ್ಯಾದ ನೋಬೆಲ್‌ ಪ್ರಶಸ್ತಿ ವಿಜೇತ ಪ್ರೊ. ವಂಗಾರಿ ಮಾತಾಯಿ ಅವರ ಬಗ್ಗೆ ಪ್ರದರ್ಶನದಲ್ಲಿ ಸವಿಸ್ತಾರ ಚಿತ್ರಮಾಹಿತಿಗಳಿವೆ.

ಸ್ಥಳೀಯ ಸಂಪನ್ಮೂಲ ಬಳಸಿ, ಮಳೆ ನೀರು ಸಂಗ್ರಹಣೆಗೋಸ್ಕರ 4,500ಕ್ಕೂ ಕಟ್ಟಡಗಳ ನಿರ್ಮಾಣಕ್ಕೆ ಕಾರಣಕರ್ತರಾದ ರಾಜೇಂದ್ರ ಸಿಂಗ್‌ ಅವರು, ರಾಜಸ್ಥಾನದ ಅನೇಕ ಕುಗ್ರಾಮಗಳಿಗೆ ನೀರು ಮತ್ತು ಆರ್ಥಿಕ ಸುಧಾರಣೆಗಳನ್ನು ತಂದ ಸಾಧನೆಯನ್ನು ಪ್ರದರ್ಶನದಲ್ಲಿ ಕಾಣಬಹುದು.

‘ಸಮಾಜದಲ್ಲಿ ಬದಲಾವಣೆ ಎಂಬುದು ವ್ಯಕ್ತಿಯಾಬ್ಬನಿಂದ ಸಾಧ್ಯ’ ಎನ್ನುವ ಅಂಶವನ್ನು ಹೊರಚಿಮ್ಮುವ ಪ್ರದರ್ಶನ, ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಜು.17ರವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಮುಕ್ತವಾಗಿ ಪ್ರದರ್ಶನ ಲಭ್ಯವಿದೆ.

ಪ್ರದರ್ಶನ ಆಯೋಜಿಸಿರುವ ಬೌದ್ಧ ಸಂಸ್ಥೆಯಾದ ಸೊಕಾ ಗಕ್ಕಾಯಿ ಹಾಗೂ ಅರ್ಥ್‌ ಚಾರ್ಟರ್‌ ಧ್ಯೇಯಗಳು ಒಂದೇ ಹಾದಿಯಲ್ಲಿವೆ. 2002ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ವಿಶ್ವ ಶೃಂಗಸಭೆಗೆ ದಿ ಅರ್ಥ್‌ ಚಾರ್ಟರ್‌ ಎಂಬ ಕರಡನ್ನು ಎಸ್‌ಸಿಐ ಮತ್ತು ಅರ್ಥ್‌ ಚಾರ್ಟರ್‌ ಜಂಟಿಯಾಗಿ ತಯಾರಿಸಿದ್ದವು.

ಸ್ಪೇನ್‌, ಚೈನಾ, ಜಪಾನ್‌, ಫ್ರಾನ್ಸ್‌, ಇಟಲಿ ಮತ್ತು ಜರ್ಮನಿ ಭಾಷೆಗಳಲ್ಲಿ ಈ ಪ್ರದರ್ಶನ ಭಾಷಾಂತರಗೊಂಡಿದೆ.

ಮುಖಪುಟ / ಬೆಂಗಳೂರು ಡೈರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more