ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶೀ ತಂಡಕ್ಕೆ ಕೋಚ್‌ ಆಗಲಾರೆ : ಕಪಿಲ್‌ದೇವ್‌

By Staff
|
Google Oneindia Kannada News

ವಿದೇಶೀ ತಂಡಕ್ಕೆ ಕೋಚ್‌ ಆಗಲಾರೆ : ಕಪಿಲ್‌ದೇವ್‌
ಹೀರೋ ಇಂಡಿಯನ್‌ ಸ್ಪೋರ್ಟ್ಸ್‌ ಅಕಾಡೆಮಿ ಸದಸ್ಯೆಯಾಗಿ ಅಶ್ವಿನಿ ನಾಚಪ್ಪ

ಬೆಂಗಳೂರು : ನಾನೆಂದಿಗೂ ವಿದೇಶೀ ತಂಡಕ್ಕೆ ಕೋಚ್‌ ಆಗಲಾರೆ. ನನ್ನ ಸೇವೆ ಏನಿದ್ದರೂ ಕೇವಲ ನನ್ನ ದೇಶಕ್ಕೆ ಮೀಸಲು ಎಂದು ಭಾರತೀಯ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್‌ ಕಪಿಲ್‌ದೇವ್‌ ಬುಧವಾರ ಘೋಷಿಸಿದ್ದಾರೆ.

ಭಾರತದ ಮಾಜಿ ಓಟಗಾರ್ತಿ ಅಶ್ವಿನಿ ನಾಚಪ್ಪ ಅವರು ಹೀರೋ ಇಂಡಿಯನ್‌ ಸ್ಪೋರ್ಟ್ಸ್‌ ಅಕಾಡೆಮಿ ಸದಸ್ಯೆಯಾಗಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಕಪಿಲ್‌ದೇವ್‌ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಕೋಚ್‌ ಆಗಬಯಸುವುದಾದರೆ ಅದು ಕೇವಲ ಭಾರತ ತಂಡಕ್ಕೆ ಮಾತ್ರ. ಹೊರದೇಶಗಳಿಗೆ ಎಂದೆಂದಿಗೂ ನಾನು ಕೋಚ್‌ ಆಗಲಾರೆ. ಗಂಗೂಲಿಗೆ ಇನ್ನಷ್ಟು ಸಮಯಾವಕಾಶ ನೀಡಬೇಕು. ಆಗ ತನ್ನ ಬ್ಯಾಟಿಂಗ್‌ ವೈಫಲ್ಯದಿಂದ ಆತ ಹೊರಬರಬಹುದು. ಆತನ ಕೆಲಸದ ಮೇಲೆ ಸಂಶಯ ಇಟ್ಟುಕೊಳ್ಳುವುದು ಸರಿಯಲ್ಲ. ಕ್ರಿಕೆಟ್‌ ಮಂಡಳಿ ಆತನ ಬೆಂಬಲಕ್ಕೆ ನಿಂತಿದೆ. ನಾವೆಲ್ಲರೂ ಆತನಿಗೆ ಬೆಂಬಲ ಸೂಚಿಸಬೇಕು ಎಂದರು.

ಅನೇಕ ಕ್ರೀಡಾಪಟುಗಳು ತಮ್ಮ ಸಾಧನೆಯಿಂದ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ದೇಶದಲ್ಲಿ ಕ್ರಿಕೆಟ್‌ ಆಟಗಾರರಿಗೆ ದೊರೆಯುವ ಮನ್ನಣೆ ಮತ್ತು ಸೌಲಭ್ಯಗಳು ಇತರ ಕ್ರೀಡಾಪಟುಗಳಿಗೂ ದೊರೆಯಬೇಕು. ಈ ಕೆಲಸವನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರು ಮಾಡಬೇಕಿದೆ ಎಂದು ಅವರು, ದೇಶದ ಬಜೆಟ್‌ನಲ್ಲಿ ಕ್ರೀಡೆಗೆ ನೀಡುತ್ತಿರುವ ಅನುದಾನದ ಕುರಿತು ಅತೃಪ್ತಿ ವ್ಯಕ್ತಪಡಿಸಿದರು.

ಕಪಿಲ್‌ದೇವ್‌ ಸಂಸ್ಥಾಪಕ ಅಧ್ಯಕ್ಷರಾಗಿರುವ ಹೀರೋ ಇಂಡಿಯನ್‌ ಸ್ಪೋಟ್ಸ್‌ ಅಕಾಡೆಮಿಯಲ್ಲಿ ಅಶ್ವಿನಿ ನಾಚಪ್ಪ ಅವರು 5ನೇ ಮಹಿಳಾ ಸದಸ್ಯೆಯಾಗಿದ್ದಾರೆ. ಈ ಮೊದಲು ಡಯಾನಾ ಎಡುಲ್ಜಿ, ಬಚೇಂದ್ರಿಪಾಲ್‌, ಎಲಿಸಾ ನೆಲ್ಸನ್‌ ಮತ್ತು ಪಿ.ಟಿ.ಉಷಾ ಈ ಅಡಾಡೆಮಿಯ ಸದಸ್ಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X