ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲಮಟ್ಟಿ ಐದನೇ ವಿದ್ಯುತ್‌ ಘಟಕ ಕಾರ್ಯಾರಂಭ

By Staff
|
Google Oneindia Kannada News

ಆಲಮಟ್ಟಿ ಐದನೇ ವಿದ್ಯುತ್‌ ಘಟಕ ಕಾರ್ಯಾರಂಭ
ಆಲಮಟ್ಟಿ ಜಲಾಶಯದ ನೀರಿನ ಮಟ್ಟ 517 ಮೀಟರ್‌

ಬಾಗಲಕೋಟೆ : ಆಲಮಟ್ಟಿ ವಿದ್ಯುದಾಗಾರದಲ್ಲಿನ 5ನೇ ಉತ್ಪಾದನಾ ಘಟಕವು ಮಂಗಳವಾರ ಕಾರ್ಯಾರಂಭ ಮಾಡಿದೆ.

ಆಲಮಟ್ಟಿ ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ವಿದ್ಯುತ್‌ ಉತ್ಪಾದನೆಗೆ ಅನುಕೂಲವಾಗಿದೆ. ವಿದ್ಯುದಾಗಾರ ಒಟ್ಟು 290 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇಲ್ಲಿ ಶನಿವಾರದವರೆಗೆ ಒಟ್ಟು 5 ಘಟಕಗಳಿಂದ 235 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ವಿದ್ಯುತ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ.ನಾಗರಾಜನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿದ್ಯುದಾಗಾರದ 6ನೇ ಉತ್ಪಾದನಾ ಘಟಕವು ಆಗಸ್ಟ್‌ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ವಿದ್ಯುದಾಗಾರದ ಕಾಮಗಾರಿ 2002ರಲ್ಲಿ ಆರಂಭವಾಗಿದ್ದು, ಇದೀಗ ಯೋಜನೆ ಮುಗಿಯುವ ಹಂತದಲ್ಲಿದೆ. ನಿಗದಿತ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡಿದ್ದು, ಆಗಸ್ಟ್‌ನಲ್ಲಿ ಇಡೀ ವಿದ್ಯುದಾಗಾರವು ದೇಶಕ್ಕೆ ಸಮರ್ಪಿಪವಾಗಲಿದೆ ಎಂದು ಅವರು ಹೇಳಿದರು.

ಜಲಾಶಯ ಭರ್ತಿ ? : ಈ ಭಾಗದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಅಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ 517 ಮೀ ದಾಖಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 519 ಮೀಟರ್‌.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X