• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಭಾರತದ ಇನಿಂಗ್ಸ್‌ ಆರಂಭಿಸಲು ರೆಡಿ : ಧೋನಿ

By Staff
|

ನಾನು ಭಾರತದ ಇನಿಂಗ್ಸ್‌ ಆರಂಭಿಸಲು ರೆಡಿ : ಧೋನಿ

ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಆಕ್ರಮಣಕಾರಿ ಆಟದ ಬಗ್ಗೆ ಮೆಚ್ಚುಗೆ

ಬೆಂಗಳೂರು : ಅವಕಾಶ ನೀಡಿದರೆ ನಾನು ಇನಿಂಗ್ಸ್‌ ಆರಂಭಿಸಲು ತಯಾರು ಎಂದು ಭರ್ಜರಿ ಹೊಡೆತಗಳ ಭಾರತದ ಬ್ಯಾಟ್ಸಮನ್‌- ವಿಕೆಟ್‌ಕೀಪರ್‌ ಮಹೇಂದ್ರಸಿಂಗ್‌ ಧೋನಿ ಮಂಗಳವಾರ ಘೋಷಿಸಿದ್ದಾರೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಟಗಾರರ ದೈಹಿಕ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಅವರು ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದರು.

ತಂಡದ ನಿರ್ವಾಹಕರು ಮತ್ತು ನಾಯಕ ಬಯಸಿದರೆ ನಾನು ಇನಿಂಗ್ಸ್‌ ಆರಂಭಿಸಲು ತಯಾರಿದ್ದೇನೆ. ಇಲ್ಲವೇ ಕೆಳಕ್ರಮಾಂಕದಲ್ಲಿ ಆಡಲು ಹೇಳಿದರೂ ಅದಕ್ಕೆ ನಾನು ತಯಾರು. ನನಗೆ ಯಾವುದೇ ಅವಕಾಶ ನೀಡಿದರೂ ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಇಚ್ಛಿಸುವೆ ಎಂದು ಹೇಳಿದರು.

ಭಾರತದ ಮಾಜಿ ವಿಕೆಟ್‌ ಕೀಪರ್‌ ಸೈಯದ್‌ ಕಿರ್ಮಾನಿ ಅವರಿಂದ ಸಲಹೆ ದೊರೆತರೆ ಪಡೆಯಲು ನಾನು ಸಿದ್ಧ. ಸ್ಪಿನ್ನರುಗಳಿಗೆ ವಿಕೆಟ್‌ ಕೀಪಿಂಗ್‌ ಮಾಡುವ ಕೌಶಲ್ಯಗಳನ್ನು ಕಲಿಯಲು ನಾನು ಆಸಕ್ತನಾಗಿದ್ದೇನೆ. ಆಸ್ಟ್ರೇಲಿಯಾದ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಅವರ ವಿಕೆಟ್‌ ಹಿಂದಿನ ಕಾರ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅವರೊಬ್ಬ ಆಕ್ರಮಣಕಾರಿ ಬ್ಯಾಟ್ಸ್‌ಮನ್‌, ಅವರ ಶೈಲಿಯನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ ಎಂದು ಧೋನಿ ಅಭಿಪ್ರಾಯಪಟ್ಟರು.

ಒಂದು ದಿನದ ಒಂಬತ್ತು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು, ತಮ್ಮ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. 123 ಎಸೆತಗಳಲ್ಲಿ 148 ರನ್‌ ಬಾರಿಸುವುದರೊಂದಿಗೆ ಚೊಚ್ಚಲ ಶತಕವನ್ನೂ ಅವರು ದಾಖಲಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more