ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮಾನಕ್ಕೆ ನಕಲಿ ಟಿಕೆಟ್‌ ಹಾಜರು?

By Staff
|
Google Oneindia Kannada News

ಬಹುಮಾನಕ್ಕೆ ನಕಲಿ ಟಿಕೆಟ್‌ ಹಾಜರು?
13 ಲಾಟರಿ ಟಿಕೆಟ್‌ ಪ್ರಕರಣಗಳನ್ನು ಸಿಓಡಿ ತನಿಖೆಗೆ ಒಪ್ಪಿಸಲಾಗಿದೆ.

ಬೆಂಗಳೂರು : ರಾಜ್ಯ ಲಾಟರಿ ಬಂಪರ್‌ ಬಹುಮಾನ ಪಡೆಯಲು ತಿರುಚಿದ ನಕಲಿ ಟಿಕೆಟ್‌ಗಳನ್ನು ಹಾಜರು ಪಡಿಸಲಾಗಿದೆ ಎಂದು ಲಾಟರಿ ಮತ್ತು ಸಣ್ಣ ಉಳಿತಾಯ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.

ಈ ತರಹದ ಒಟ್ಟು 13 ಪ್ರಕರಣಗಳನ್ನು ಸಿಓಡಿ ತನಿಖೆಮಾಡಲು ಆದೇಶ ನಾಡಲಾಗಿದೆ ಎಂದು ಗುರುವಾರ ಅವರು ಸುದ್ದಿಗಾರರಿಗೆ ತಿಳಿಸಿದರು. ಒಂದೆರಡು ಪ್ರಕರಣಗಳಲ್ಲಿ ಟಿಕೆಟ್‌ ಸಂಖ್ಯೆಯನ್ನು ತಿದ್ದಿರುವ ನಿದರ್ಶನವಿದೆ. ಹೀಗೆ ತಿರುಚಿದ ಟಿಕೆಟ್‌ ಹಾಜರುಪಡಿಸಿ ಐದು ಲಕ್ಷ ರೂಪಾಯಿ ಬಹುಮಾನ ಪಡೆಯಲೆತ್ನಿಸಿದ್ದ ನವಲಗುಂದದ ವ್ಯಕ್ತಿಯಾಬ್ಬನ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲಾಗಿದೆ. ಅಸಲಿ ವಿಜೇತರಾದ ಕೇರಳದ ವ್ಯಕ್ತಿಯಾಬ್ಬರು ಬಹುಮಾನದ ಹಣ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಬಹುಮಾನ ವಿಜೇತರು ಹಣಪಡೆಯಲು ಬಂದಾಗ ಸಿಬ್ಬಂದಿಯವರು, ಇದು ನಕಲಿ ಟಿಕೆಟ್‌, ನಿನ್ನ ಮೇಲೆ ಮೊಕದ್ದಮೆ ಹೂಡುತ್ತೇವೆ ಎಂದು ಬೆದರಿಸಿ ಟಿಕೆಟ್‌ ಪಡೆದುಕೊಳ್ಳುತ್ತಾರೆ, ಆನಂತರ ಬಹುಮಾನದ ಹಣವನ್ನು ಪಡೆದುಕೊಳ್ಳುತ್ತಾರೆ ಎಂಬ ಶಂಕೆ ಇದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ, ಕೆಲ ಪ್ರಕರಣಗಳಲ್ಲಿ ವಿಜೇತರು ಬಹುಮಾನದ ಹಣವನ್ನೇ ಪಡೆದಿಲ್ಲ. ಇದರ ಮೊತ್ತ ರೂ.6.5 ಕೋಟಿಗಳಾಗಿದೆ ಎಂದು ಅವರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X