ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆವಿನ್ಯೂ ನಿವೇಶನಗಳ ನೋಂದಣಿಗೆ ಮಾರ್ಗಸೂಚಿ

By Staff
|
Google Oneindia Kannada News

ರೆವಿನ್ಯೂ ನಿವೇಶನಗಳ ನೋಂದಣಿಗೆ ಮಾರ್ಗಸೂಚಿ
ಭೂಮಾಫಿಯಾಕ್ಕೆ ಕಡಿವಾಣ ಹಾಕಲು ನೋಂದಣಿಯನ್ನು ಸರ್ಕಾರ ರದ್ದುಪಡಿಸಿತ್ತು -ಸಿಂಧ್ಯ

ಬೆಂಗಳೂರು : ರೆವಿನ್ಯೂ ನಿವೇಶನಗಳ ನೋಂದಣಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಅದೇಶವನ್ನು ಸೋಮವಾರ(ಜು.4) ಸರ್ಕಾರ ಹೊರಡಿಸಲಿದೆ.

ರೆವಿನ್ಯೂ ನಿವೇಶನಗಳ ನೋಂದಣಿಯನ್ನು ಸರ್ಕಾರ ರದ್ದುಪಡಿಸಿರುವುದರಿಂದ ಸಾರ್ವಜನಿಕರಿಗೆ ಆಗಿರುವ ತೊಂದರೆ ತಪ್ಪಿಸಲು, ಈ ಸುತ್ತೋಲೆಯಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡುವುದಾಗಿ ಕಂದಾಯ ಸಚಿವರ ಪರವಾಗಿ ಕೈಗಾರಿಕಾ ಸಚಿವ ಪಿ.ಜಿ.ಆರ್‌.ಸಿಂಧ್ಯ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಪ್ರಶ್ನೆಯಾಂದಿಗೆ ಉತ್ತರಿಸುತ್ತಿದ್ದ ಅವರು, ರೆವಿನ್ಯೂ ನಿವೇಶನದಾರರು ಮತ್ತು ಭೂ ಮಾಲೀಕರು ತಮ್ಮ ನಿವೇಶನ, ಕಟ್ಟಡಗಳನ್ನು ನೋಂದಣಿ ಮಾಡಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಪ್ರಭಾವಿ ವ್ಯಕ್ತಿಗಳು ಅನಧಿಕೃತ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸುವುದನ್ನು ತಪ್ಪಿಸಲು, ರೆವಿನ್ಯೂ ನಿವೇಶನಗಳ ನೋಂದಣಿ ರದ್ದು ಮಾಡಲಾಗಿತ್ತು ಎಂದು ಸಿಂಧ್ಯ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X