ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆಗೊಂದು ವಿಜಯಕರ್ನಾಟಕ, ಸಂಜೆವಾಣಿ ಏನಂತಿಯಾ?

By Staff
|
Google Oneindia Kannada News

ಸಂಜೆಗೊಂದು ವಿಜಯಕರ್ನಾಟಕ, ಸಂಜೆವಾಣಿ ಏನಂತಿಯಾ?
ಕನ್ನಡ ಪತ್ರಿಕೋದ್ಯಮದಲ್ಲಿ ವ್ಯಾಪಾರ ದಾಟ, ಗೆಲ್ಲೋರು ಯಾರು, ನಿಲ್ಲೋರು ಯಾರು?

ಬೆಂಗಳೂರು : ಅತ್ಯಧಿಕ ಪ್ರಸರಣವುಳ್ಳ ಕನ್ನಡ ದೈನಿಕ ‘ವಿಜಯಕರ್ನಾಟಕ ’ ಸಂಜೆ ಆವೃತ್ತಿಯನ್ನು ಶುಕ್ರವಾರ(ಜು.01)ದಿಂದ ಹೊರತಂದಿದೆ.

‘ವಿಜಯಕರ್ನಾಟಕ’ ಹೆಸರಿನಲ್ಲಿಯೇ ಹೊರತರಲಾಗುತ್ತಿರುವ ಈ ಪತ್ರಿಕೆಯ ಬೆಲೆ ಎರಡು ರೂಪಾಯಿ. ಈ ಹಿಂದೆ ವಿಆರ್‌ಎಲ್‌ ಸಮೂಹ ಒಂದು ರೂ.ಗೆ ‘ವಿಜಯ್‌ ಟೈಮ್ಸ್‌ ’ ಸಂಜೆ ಆವೃತ್ತಿಯನ್ನು ಹೊರತಂದಿತ್ತು.

ಬೆಳಗ್ಗೆಯಿಂದ ರಾತ್ರಿಯವರೆಗೆ ಒಂದೇ ಸುದ್ದಿಯನ್ನು ಓದುವ ಅನಿವಾರ್ಯತೆ ತಪ್ಪಿಸಲು ಹಾಗೂ ಓದುಗರ ಅಗತ್ಯ ಪೂರೈಸಲು ಈ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ‘ವಿಜಯ್‌ ಟೈಮ್ಸ್‌’ ಕಾರ್ಯನಿರ್ವಾಹಕ ಸಂಪಾದಕ ಮತ್ತು ವಿಜಯಾನಂದ ರೋಡ್‌ ವೇ ಲಿ., ನಿರ್ದೇಶಕ ಎಲ್‌.ರಮಾನಂದ ಭಟ್‌.

ಸ್ಪರ್ಧೆ ಮತ್ತು ಪೈಪೋಟಿ ಮುದ್ರಣ ಮಾಧ್ಯಮದಲ್ಲಿ ಮಾತ್ರವಲ್ಲ , ಟೆಲಿವಿಷನ್‌ ಕ್ಷೇತ್ರದಲ್ಲೂ ಇದೆ. ಈ ನೂತನ ಸಂಜೆ ಪತ್ರಿಕೆ ಹಳೆಯ ಸುದ್ದಿಗಳನ್ನು ಪುನರಾವರ್ತಿಸದೇ, ತಾಜಾ ಸುದ್ದಿಗಳನ್ನಷ್ಟೇ ಓದುಗರಿಗೆ ತಲುಪಿಸಲಿದೆ. ರಾಜಧಾನಿ ನಗರದಲ್ಲಿ ಕನ್ನಡ ಸಂಜೆ ಪತ್ರಿಕೆಗಳ ಒಟ್ಟು ಪ್ರಸರಣ 30ಸಾವಿರ. ವಿಜಯ ಕರ್ನಾಟಕ ಪ್ರವೇಶದಿಂದ ಮಾರುಕಟ್ಟೆ ಹಿಗ್ಗಿ, 45ಸಾವಿರ ತಲುಪಿದೆ ಎಂದು ರಮಾನಂದ ಭಟ್‌ ಹೆಮ್ಮೆಯಿಂದ ಹೇಳುತ್ತಾರೆ.

ಕನ್ನಡ ಪತ್ರಿಕೋದ್ಯಮ : ಪತ್ರಿಕಾದಿನಾಚರಣೆಯ ಹಿನ್ನೆಲೆಯಲ್ಲಿ ಕನ್ನಡ ಪತ್ರಿಕೋದ್ಯಮದತ್ತ ಕಣ್ಣು ಹಾಯಿಸಿದರೆ, ಒಂದಿಷ್ಟು ಖುಷಿ, ಒಂದಿಷ್ಟು ನಿರಾಸೆ ಎರಡು ಒಟ್ಟೊಟ್ಟಿಗೆ ಕಾಣಿಸುತ್ತವೆ.

ಪತ್ರಿಕೆಗಳ ಸಂಖ್ಯೆ ಹೆಚ್ಚಿವೆ, ಪ್ರಸರಣ ಹೆಚ್ಚಿದೆ, ಪತ್ರಿಕೆಗಳ ಗುಣಮಟ್ಟ ಹೆಚ್ಚಿದೆ. ಆದರೆ ಆದಾಯದ ಮೂಲಗಳು(ಜಾಹಿರಾತು ಪ್ರಮಾಣ)ಗಣನೀಯವಾಗಿ ಹೆಚ್ಚಿಲ್ಲ. ಈಗ ದರ ಸಮರ(ಪತ್ರಿಕೆ ಬೆಲೆ ಕೇವಲ ರೂ.1.50/ರೂ.1)ಅಂತ್ಯಗೊಂಡಿದ್ದು, ಮಾರುಕಟ್ಟೆಯಲ್ಲಿ ತಳವೂರಲು ಪತ್ರಿಕೆಗಳು ನಾನಾ ಸರ್ಕಸ್ಸು ನಡೆಸುತ್ತಿವೆ.

ಪ್ರಜಾವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳ ಬೆಲೆ 2.ರೂನಿಂದ 2.50ಕ್ಕೆ ಜು.1ರಿಂದ ಹೆಚ್ಚಳವಾಗಿದೆ. ಉಷಾಕಿರಣ, ಸೂರ್ಯೋದಯ ಪತ್ರಿಕೆಗಳ ಬೆಲೆ ಯಥಾಸ್ಥಿತಿಯಲ್ಲಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X