ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವೆಗೆ ಸಜ್ಜಾಗುತ್ತಿರುವ ಹೆಬ್ಬಾಳ ಪುಷ್ಪ ಹರಾಜು ಕೇಂದ್ರ

By Staff
|
Google Oneindia Kannada News

ಸೇವೆಗೆ ಸಜ್ಜಾಗುತ್ತಿರುವ ಹೆಬ್ಬಾಳ ಪುಷ್ಪ ಹರಾಜು ಕೇಂದ್ರ
ಭಾನುವಾರದವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಪುಷ್ಪ ಸೌಂದರ್ಯ ಮೇಳ

ಬೆಂಗಳೂರು : ನಗರದ ಹೆಬ್ಬಾಳದಲ್ಲಿ ಪುಷ್ಪ ಹರಾಜು ಕೇಂದ್ರ ಅಕ್ಟೋಬರ್‌ ವೇಳೆಗೆ ಕಾರ್ಯಾರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ದಕ್ಷಿಣ ಏಷ್ಯಾದ ಅತಿದೊಡ್ಡ ಪುಷ್ಪ ಪ್ರದರ್ಶನ ‘ಫ್ಲೋರಾ ಎಕ್ಸ್‌ಪೊ-2005ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪುಷ್ಪ ಹರಾಜು ಕೇಂದ್ರ ಆರಂಭಗೊಂಡರೆ, ಹೊರ ರಾಜ್ಯಗಳು ಕೂಡಾ ಇಲ್ಲಿಂದ ಪುಷ್ಪ ರಫ್ತು ಮಾಡಬಹುದು ಎಂದರು.

ತೋಟಗಾರಿಕಾ ಸಚಿವ ಆರ್‌.ಶ್ರೀನಿವಾಸ್‌ ಮಾತನಾಡಿ, ರಾಜ್ಯದ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಾಂಪ್ರದಾಯಿಕ ಹೂಗಳಾದ ಗುಲಾಬಿ, ಚಂಪಕ ಮುಂತಾದವುಗಳನ್ನು ಬೆಳೆಸಲಾಗುತ್ತಿದೆ. ರಾಜ್ಯದ ಕೃಷಿಕರ ಸಾಧನೆ ಹೆಮ್ಮೆಪಡುವಂತಿದೆ ಎಂದು ಅಭಿಪ್ರಾಯಪಟ್ಟರು.

ಭಾನುವಾರದವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X