• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷ ವೈಭವಕ್ಕೆ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ

By Staff
|

ವರ್ಷ ವೈಭವಕ್ಕೆ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ

ಉತ್ತರ ಕನ್ನಡದಲ್ಲಿ ರಭಸದ ಮಳೆ, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ

ಬೆಂಗಳೂರು : ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ ಕಂಡಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಎರಡು ಅಡಿ ಏರಿಕೆಯಾಗಿದೆ.

ಮುಂಗಾರು ಚುರುಕು ಕಂಡಿದ್ದು, ಗುರುವಾರ ಮತ್ತಷ್ಟು ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದ ವಿವಿದೆಡೆ ಮಳೆ ಸುರಿಯುತ್ತಿದೆ.

ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ಗುಲ್ಪರ್ಗ, ಹಾವೇರಿ, ಗದಗ, ಹಾಸನಗಳಲ್ಲಿ ಉತ್ತಮ ಮಳೆಯಾಗಿದೆ. ರೈತರು ಈ ಭಾಗದಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ (ಜಲಾಶಯದ ಗರಿಷ್ಠ ಮಟ್ಟವನ್ನು ಆವರಣದಲ್ಲಿ ಸೂಚಿಸಲಾಗಿದೆ):

ಲಿಂಗನಮಕ್ಕಿ -1756 ಅಡಿ(1819 ಅಡಿ)

ಕೆಆರ್‌ಎಸ್‌ -82.50 ಅಡಿ(124.80 ಅಡಿ)

ಸುಪಾ -519.75 ಮೀ(564 ಮೀ)

ತುಂಗಭದ್ರ -1580 ಅಡಿ(1633 ಅಡಿ)

ಅಲಮಟ್ಟಿ -506.6 ಮೀ(519.6ಮೀ)

ಭದ್ರಾ - 118.7(186)

ಕಬಿನಿ -2270.49 ಅಡಿ(2284ಅಡಿ)

ಹಾರಂಗಿ -2810.81 ಅಡಿ(2922 ಅಡಿ)

ಮಲಪ್ರಭಾ -2034.75 ಅಡಿ(2079.50 ಅಡಿ)

ಘಟಪ್ರಭಾ -2083 ಅಡಿ(2175 ಅಡಿ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more