ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪೇಗೌಡ ದಿನಾಚರಣೆಯ ಸಂಭ್ರಮ, ಸಡಗರ

By Staff
|
Google Oneindia Kannada News

ಕೆಂಪೇಗೌಡ ದಿನಾಚರಣೆಯ ಸಂಭ್ರಮ, ಸಡಗರ
ನಗರದ ನೂರು ವಾರ್ಡ್‌ಗಳಲ್ಲಿ ಹಬ್ಬದ ವಾತಾವರಣ

ಬೆಂಗಳೂರು : ರಾಜಧಾನಿ ನಗರವನ್ನು ರೂಪಿಸಿದ ದಿವಂಗತ ಕೆಂಪೇಗೌಡ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ಈಗ ಜಗಮಗಿಸುತ್ತಿದೆ.

ಬೆಂಗಳೂರು ಮಹಾನಗರ ಪಾಲಿಕೆ ಸುಮಾರು 60ಲಕ್ಷ ರೂ ವೆಚ್ಚದಲ್ಲಿ ಗುರುವಾರ (ಜೂನ್‌ 30) ಮತ್ತು ಶುಕ್ರವಾರ(ಜುಲೈ 01) ಕೆಂಪೇಗೌಡ ದಿನಾಚರಣೆಯನ್ನು ವಿಜಂಭೃಣೆಯಿಂದ ಆಚರಿಸಲು ಮುಂದಾಗಿದೆ. ಗುರುವಾರ ಕೆಂಪೇಗೌಡ ಉತ್ಸವ ಆರಂಭಗೊಂಡಿದ್ದು, ನಗರದಲ್ಲಿ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಸಂಜೆ 4.30ಕ್ಕೆ ಹಾಸ್ಯೋತ್ಸವ, ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳನ್ನು ಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದೆ. ಜುಲೈ 1ರಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಭಾಗವಹಿಸಲಿದ್ದು, ಉತ್ತಮ ಸೇವೆ ಸಲ್ಲಿಸಿದ ಪಾಲಿಕೆ ನೌಕರರಿಗೆ ಪ್ರಶಸ್ತಿ ಮತ್ತು ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

ನಗರದ ನೂರು ವಾರ್ಡ್‌ಗಳಲ್ಲಿ ಹಬ್ಬದ ವಾತಾವರಣ ಮೇಳೈಸಿದ್ದು, ಪಾಲಿಕೆ ವ್ಯಾಪ್ತಿಯ ಉದ್ಯಾನಗಳು, ಕಟ್ಟಡಗಳು, ಪ್ರಮುಖ ಬೀದಿಗಳು ದೀಪಾಲಂಕಾರದಿಂದ ಪ್ರಜ್ವಲಿಸುತ್ತಿವೆ

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X