ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆದಾರರ ಸಂದೇಹಗಳಿಗೆ ಸಮಾಧಾನ ಇಲ್ಲಿ ಲಭ್ಯ!

By Staff
|
Google Oneindia Kannada News

ತೆರಿಗೆದಾರರ ಸಂದೇಹಗಳಿಗೆ ಸಮಾಧಾನ ಇಲ್ಲಿ ಲಭ್ಯ!
ಜು.1ರಿಂದ ನಗರದಲ್ಲಿ ಎರಡು ತೆರಿಗೆ ಸಹಾಯ ಕೇಂದ್ರಗಳ ಸೇವೆ ಶುರು

ಬೆಂಗಳೂರು : ಸೇವಾ ತೆರಿಗೆ, ಅಬಕಾರಿ ತೆರಿಗೆ ಹಾಗೂ ಸುಂಕಗಳ ಬಗೆಗೆ ತೆರಿಗೆದಾರರಿಗೆ ಮಾಹಿತಿ ಒದಗಿಸಲು ನಗರದಲ್ಲಿ ಎರಡು ಸಹಾಯ ಕೇಂದ್ರಗಳನ್ನು ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯು ಜು.1ರಿಂದ ತೆರೆಯಲಿದೆ.

ಈ ಕೇಂದ್ರಗಳಿಗೆ ಲಿಖಿತ ಆಕ್ಷೇಪಗಳು, ಮೌಖಿಕ ಆಕ್ಷೇಪಗಳಿದ್ದಲ್ಲಿ ತಿಳಿಸಬಹುದಾಗಿದೆ. ತಮ್ಮ ಆಕ್ಷೇಪಗಳಿಗೆ ಸರಿಯಾದ ಉತ್ತರ ದೊರೆಯದಿದ್ದಾಗ ನೇರವಾಗಿ ಹಿರಿಯ ಅಧಿಕಾರಿಗಳ ನೇತೃತ್ವದ ಘಟಕಕ್ಕೆ ವರ್ಗಾಯಿಸಿ ಉತ್ತರ ನೀಡಲಾಗುವುದು. ಇ-ಮೇಲ್‌ ಮೂಲಕವೂ ತೆರಿಗೆ ಪಾವತಿದಾರರ ಸಮಸ್ಯೆಗಳನ್ನು ಇಲ್ಲಿ ಪರಿಹರಿಸಲಾಗುವುದು.

ಈ ಕೇಂದ್ರಗಳು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 11ರಿಂದ 1ಗಂಟೆಯವರೆಗೆ ಸೇವೆ ಸಲ್ಲಿಸಲಿವೆ.

ಸಹಾಯ ಕೇಂದ್ರಗಳ ವಿಳಾಸಗಳು :

  • ಬೆಂಗಳೂರು ವಾಣಿಜ್ಯ ಮಂಡಳಿ ಕಚೇರಿ, ನಂ, 14,3ನೇ ಮಹಡಿ, ಷರೀಫ್‌ ಚೇಂಬರ್ಸ್‌, ಕನ್ನಿಂಗ್‌ ಹ್ಯಾಂ ರಸ್ತೆ ಬೆಂಗಳೂರು-560052, ದೂರವಾಣಿ ಸಂಖ್ಯೆ (080)22286080, 22286082.
  • ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ, ನಂ2/106,17ನೇ ಕ್ರಾಸ್‌, ಮಾಗಡಿ ಕಾರ್ಡ್‌ ರಸ್ತೆ, ವಿಜಯನಗರ ಬೆಂಗಳೂರು-560040 ದೂರವಾಣಿ ಸಂಖ್ಯೆ(080) 23358698 ಇ-ಮೇಲ್‌ವಿಳಾಸ : [email protected]
  • (ಇನ್ಫೋ ವಾರ್ತೆ)

    ಮುಖಪುಟ / ಬೆಂಗಳೂರು ಡೈರಿ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X