ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಕಾಂಗ್ರೆಸ್‌ ಸಾರಥ್ಯಕ್ಕೆ ಎಸ್‌.ಎಂ.ಕೃಷ್ಣ ?

By Super
|
Google Oneindia Kannada News

ಬೆಂಗಳೂರು : ಕಾಲಮಿತಿ ಮುಗಿದರೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರು ನಾಮಪತ್ರ ಸಲ್ಲಿಸಲಿಲ್ಲ. ಮಂಗಳವಾರ ಮಧ್ಯಾಹ್ನ 2ಗಂಟೆಯಾಳಗೆ ನಾಮಪತ್ರ ಸಲ್ಲಿಸಲು ಕಾಲಮಿತಿ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸದೇ, ಹೈಕಮಾಂಡ್‌ ಯಾರನ್ನೇ ಹೆಸರಿಸಿದರೂ ಸಮ್ಮತಿಸುವ ಏಕತೆಯನ್ನು ಪ್ರದರ್ಶಿಸಿದೆ. ಬುಧವಾರ ಸಭೆ ಸೇರಲಿರುವ ಕೆಪಿಸಿಸಿ ಘಟಕವು, ಕೇರಳದಂತೆ ರಾಜ್ಯಕ್ಕೂ ಹೈಕಮಾಂಡ್‌ ಅಧ್ಯಕ್ಷರನ್ನು ನೇಮಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಿದೆ.

ಈಗಾಗಲೇ ನಿಗದಿ ಪಡಿಸಿದಂತೆ ಜೂನ್‌ 29ರಂದು ಅಧ್ಯಕ್ಷ ಪದವಿಗೆ ಚುನಾವಣೆ ನಡೆಯಬೇಕಿತ್ತು. ಹಾಲಿ ಅಧ್ಯಕ್ಷ ಜನಾರ್ದನ ಪೂಜಾರಿ ಪುನಃ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ.ರಾಜಶೇಖರನ್‌, ಮಾಜಿ ಸಂಸದ ಜಿ.ಎಸ್‌.ಬಸವರಾಜು, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ್‌, ಡಿ.ಬಿ.ಚಂದ್ರೇಗೌಡ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿವೆ.

ಈ ಮಧ್ಯೆ ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ , ಸಕ್ರಿಯ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿರುವ ಹಿನ್ನೆಲೆಯಲ್ಲಿ , ಅವರ ಹೆಸರೂ ಸಹಾ ಕೇಳಿ ಬರತೊಡಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಲಿಂಗಾಯಿತ ಮತ್ತು ಒಕ್ಕಲಿಗ ಕೋಮುಗಳ ನಡುವೆ ತೆರೆಮರೆಯಲ್ಲಿ ಕಸರತ್ತುಗಳು ನಡೆದಿವೆ.(ಪಿಟಿಐ)

English summary
Congress in Karnataka Tuesday(Jun.28) stood unitedly in transferring the process of naming the president of the state unit to the party high command with no leader filing the nomination papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X