ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರೇಶ್‌ ಕನಸಿಗೆ ಈಗ ಆರು ವರ್ಷ!

By Staff
|
Google Oneindia Kannada News

ವೀರೇಶ್‌ ಕನಸಿಗೆ ಈಗ ಆರು ವರ್ಷ!
ಸ್ಯಾಂಡಲ್‌ವುಡ್‌ನ ಸಾರ ಬಸಿದಿಡುತ್ತಿರುವ ‘ಚಿತ್ರಲೋಕ ’ ಸಿನಿಮಾ ಪೋರ್ಟಲ್‌ಗೆ ಈಗ 6ನೇ ಹುಟ್ಟುಹಬ್ಬದ ಸಂಭ್ರಮ.

ಗಾಂಧೀನಗರದ ಗ್ರೀನ್‌ ಹೌಸ್‌ ರೆಸ್ಟೋರೆಂಟ್‌ನಲ್ಲಿ ಅಂದು ಚಿತ್ರೋದ್ಯಮ ಮತ್ತು ಮಾಧ್ಯಮದ ಪ್ರತಿನಿಧಿಗಳು ಉಲ್ಲಾಸದಿಂದ ಸುತ್ತಾಡುತ್ತಿದ್ದರು. ಚಿತ್ರಲೋಕ.ಕಾಮ್‌ನ ನೇತಾರ ಕೆ.ಎಂ.ವೀರೇಶ್‌ ಅಂದಿನ ಕಾರ್ಯಕ್ರಮದ ಕೇಂದ್ರ ಬಿಂದು. ‘ಚಿತ್ರಲೋಕ’ 6ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮವನ್ನು ಗೆಳೆಯರೊಂದಿಗೆ ಅವರು ಭಾನುವಾರ(ಜೂ.26) ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಹಲೋ ವರ್ಲ್ಡ್‌ ಜೊತೆಗೆ ಟೈಅಪ್‌ ಮಾಡಿಕೊಂಡಿರುವ ವಿಷಯವನ್ನು ಪ್ರಕಟಿಸಿದ ವೀರೇಶ್‌, ಕಳೆದ ಐದು ವರ್ಷಗಳ ಪಯಣವನ್ನು ಸ್ಮರಿಸಿದರು. ‘ಚಿತ್ರಲೋಕ’ ಮೈತುಂಬಿ ಬೆಳೆಯಲು ಸಹಕಾರ ನೀಡಿದ ಚಿತ್ರೋದ್ಯಮ ಮತ್ತು ಮಾಧ್ಯಮ ಮಿತ್ರರ ಸಹಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ದಟ್ಸ್‌ಕನ್ನಡ ಡಾಟ್‌ಕಾಮ್‌ ಸಂಪಾದಕ ಎಸ್‌.ಕೆ.ಶ್ಯಾಮಸುಂದರ ಮಾತನಾಡಿ, ಪೋರ್ಟಲ್‌ಗಳನ್ನು ಕಟ್ಟುವುದು ಮತ್ತು ಉಳಿಸಿಕೊಳ್ಳುವುದು ಈ ದಿನಗಳಲ್ಲಿ ಸಾಹಸವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ವೀರೇಶ್‌ ಸಾಧನೆ ಮೆಚ್ಚುವಂತದ್ದು. ಅಂತರ್ಜಾಲವು ಭವಿಷ್ಯದ ಮಾಧ್ಯಮ ಎಂದು ಅಭಿಪ್ರಾಯಪಟ್ಟರು.

ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ವಿಗ್ಗೀಸ್‌ ಡಾಟ್‌ ಕಾಮ್‌ನ ರೂಪಾ ವಿಘ್ನೕಶ್‌, ಹಲೋ ವರ್ಲ್ಡ್‌ನ ಕುಮಾರ್‌, ನಟ ರಾಘವೇಂದ್ರ ರಾಜ್‌ಕುಮಾರ್‌, ಶ್ರೀನಿವಾಸ ಮೂರ್ತಿ, ನಿರ್ಮಾಪಕರಾದ ಶೈಲೇಂದ್ರ ಬಾಬು, ಸೂರಪ್ಪ ಬಾಬು, ಎಂ.ಜಿ.ರಾಮಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಟಿ ತಾರಾ ಅವರು ತಮ್ಮ ಪತಿ ಎಚ್‌.ಸಿ ವೇಣು ಅವರೊಂದಿಗೆ ಆಗಮಿಸಿದ್ದರು.

ಡಿ.ವಿ. ಸುಧೀಂದ್ರ, ನಾಗೇಂದ್ರ, ವಿಜಯ್‌ಕುಮಾರ್‌, ವಾಸು, ಕಲ್ಲೇಶ್‌, ಪಿ.ಜಿ.ಶ್ರೀನಿವಾಸ ಮೂರ್ತಿ, ಗಿರಿ ಶಾಸ್ತ್ರೀ, ಸದಾಶಿವ ಶೆಣೈ, ಕೆ.ಎಚ್‌.ಸಾವಿತ್ರಿ, ಸರಸ್ವತಿ ಜಾಗೀರ್‌ದಾರ್‌, ಮೈಸೂರು ಹರೀಶ್‌, ಚೇತನ್‌ ನಾಡಿಗೇರ್‌, ಎಂ.ಎಸ್‌.ರಾಘವೇಂದ್ರ, ಪರಮೇಶ್ವರ್‌ ಗುಂಡ್ಕಲ್‌, ಕೆ.ಎನ್‌.ನಾಗೇಶ್‌ಕುಮಾರ್‌, ಡಿ.ಸಿ.ನಾಗೇಶ್‌ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X