ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಭೋಮಂಡಲದಲ್ಲಿ ತ್ರಿಗ್ರಹಗಳ ಅಪರೂಪದ ಸಭೆ

By Staff
|
Google Oneindia Kannada News

ನಭೋಮಂಡಲದಲ್ಲಿ ತ್ರಿಗ್ರಹಗಳ ಅಪರೂಪದ ಸಭೆ
ಇಂದು ಸೂರ್ಯಮುಳುಗಿದ ಮೇಲೆ ಆಕಾಶದತ್ತ ನೋಡಿ!

ಬೆಂಗಳೂರು : ನಭೋಮಂಡಲದಲ್ಲಿ ಸೋಮವಾರ(ಜೂ.27) ನಡೆಯಲಿರುವ ಅತ್ಯುದ್ಭುತ ಚಮತ್ಕಾರವನ್ನು ನೋಡಲು ಮರೆಯದಿರಿ! ಈ ದಿನ ಸೂರ್ಯ ಮುಳುಗಿದ ಮೇಲೆ ಒಮ್ಮೆ ಆಗಸದೆಡೆಗೆ ನೋಡಿ, ಅಲ್ಲಿ ನಿಮಗೊಂದು ಅಚ್ಚರಿ ಕಾದಿದೆ!

ಶನಿ, ಶುಕ್ರ ಮತ್ತು ಬುಧ ಗ್ರಹಗಳನ್ನು ಏಕಕಾಲದಲ್ಲಿ ಒಂದೆಡೆ ಕಾಣುವ ಅವಕಾಶ 25 ವರ್ಷಗಳಿಗೊಮ್ಮೆ ಮಾತ್ರ ಲಭ್ಯ. ಅಂತಹ ಅವಕಾಶ ಈಗ ನಿಮ್ಮ ಮುಂದಿದೆ. ಸೂರ್ಯನ ಪರಿವಾರ(ಸೌರಮಂಡಲ)ದ ಒಂಬತ್ತು ಗ್ರಹಗಳ ಪೈಕಿ ಅತ್ಯಂತ ಪ್ರಕಾಶಮಾನ ಕಾಯ ಎನ್ನಲಾಗುವ ಶನಿ, ಶುಕ್ರ ಹಾಗೂ ಬುಧ ಗ್ರಹಗಳ ಅಪೂರ್ವ ಸಂಯೋಜನೆ ಇಂದು ಬರಿಗಣ್ಣಿಗೆ ಕಾಣಿಸಲಿವೆ.

ಗೋಧೂಳಿ ಸಮಯದಲ್ಲಿ ಆಗಸದ ಪಶ್ಚಿಮ-ವಾಯವ್ಯ ಭಾಗದಲ್ಲಿ ಈ ದೃಶ್ಯಾವಳಿ ಲಭ್ಯ. ಸೂರ್ಯಾಸ್ತವಾದ 45 ನಿಮಿಷಗಳಲ್ಲಿ ಆಗಸದಲ್ಲಿ ನಕ್ಷತ್ರಗಳು ಕಾಣಿಸುತ್ತಿದ್ದಂತೆ, ನಿಮಗೆ ಮಿನುಗುವ ಶುಕ್ರ ಮೊದಲು ಕಾಣಿಸುವನು. ನೀವು ಅಚ್ಚರಿಯಿಂದ ಕಣ್ಣು ಅರಳಿಸುತ್ತಿದ್ದಂತೆಯೇ ಬುಧ ಮತ್ತು ಶನಿಗ್ರಹಗಳು ಗೋಚರಿಸಲಿವೆ. ಶುಕ್ರ ಮತ್ತು ಬುಧ ಗ್ರಹಗಳು ಅವಳಿ ಗ್ರಹಗಳಂತೆ ಈ ಸಂದರ್ಭದಲ್ಲಿ ಕಂಡು ಬರಲಿವೆ.

ಸೌರಮಂಡಲದ ಸಹಜ ಪ್ರಕ್ರಿಯೆಯಾಗಿರುವ ಈ ತ್ರಿಗ್ರಹಗಳ ಕೂಟದಿಂದ ಯಾವ ಪರಿಣಾಮಗಳಾಗದಿದ್ದರೂ, ಒಂದು ಗ್ರೂಪ್‌ ಫೋಟೋ ಮಾತ್ರ ವಿಜ್ಞಾನಿಗಳಿಗೆ ಲಭ್ಯವಾಗಲಿದೆ. ಇಂತಹುದೇ ಚಿತ್ರಣ ವಾರ ಪೂರ್ತಿ ಕಂಡುಬರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X