ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದ ಶಾಕ್‌ : ಬಸ್‌ ಪ್ರಯಾಣ ದರ ಹೆಚ್ಚಳ

By Staff
|
Google Oneindia Kannada News

ಶನಿವಾರದ ಶಾಕ್‌ : ಬಸ್‌ ಪ್ರಯಾಣ ದರ ಹೆಚ್ಚಳ
ಬಿಎಂಟಿಸಿಯಲ್ಲಿ ಎಲ್ಲ ಪ್ರಯಾಣಿಕರಿಗೂ ಒಂದು ಲಕ್ಷ ಮೊತ್ತದ ಅಪಘಾತ ವಿಮೆ

ಬೆಂಗಳೂರು : ಬಸ್‌ ಪ್ರಯಾಣ ದರ ಹೆಚ್ಚಳದ ಮೂಲಕ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳದ ಬಿಸಿ ಶ್ರೀಸಾಮಾನ್ಯರಿಗೆ ತಟ್ಟಿದೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶೇ.13ರಷ್ಟು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶೇ.15ರಷ್ಟು ದರ ಹೆಚ್ಚಳ ಮಾಡಿವೆ. ಶನಿವಾರ ಪತ್ರಿಕೆಗಳಲ್ಲಿ ದರ ಹೆಚ್ಚಳದ ಸುದ್ದಿ ಕಂಡು ಪ್ರಯಾಣಿಕರು ಜಿಗುಪ್ಸೆಗೊಂಡಿದ್ದಾರೆ.

ತೈಲ ದರ ಹೆಚ್ಚಳ, ನೌಕರರಿಗೆ ಶೇ.6ರಷ್ಟು ಡಿ.ಎ ಮತ್ತು ವೇತನ ಪರಿಷ್ಕರಣದಿಂದ ವಾರ್ಷಿಕ 120ಕೋಟಿ ರೂ. ಹೊರೆ ಬೀಳಲಿದೆ. ಹೀಗಾಗಿ ಅದನ್ನು ಸರಿದೂಗಿಸಲು ಪ್ರಯಾಣ ದರದ ಹೆಚ್ಚಳ ಅನಿವಾರ್ಯವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ಬಿಎಂಟಿಸಿ : ನಗರ ಸಾರಿಗೆಯಲ್ಲಿ ಮಾಸಿಕ ಮತ್ತು ದಿನದ ಪಾಸ್‌ ದರದಲ್ಲಿ ಏರಿಕೆಯಾಗಿಲ್ಲ. ಹೊಸ ದರಗಳನ್ವಯ ನಗರದ ಐದನೇ ಹಂತದವರೆಗೆ 1ರೂ. ಮತ್ತು ನಂತರದ ಪ್ರತಿ ಹಂತಕ್ಕೆ 2ರೂ. ಹೆಚ್ಚಳವನ್ನು ಬಿಎಂಟಿಸಿ ಜಾರಿಗೆ ತಂದಿದೆ.

ಮಾಸಿಕ ಪಾಸ್‌ ಹೊಂದಿದವರಿಗೆ ಮಾತ್ರ ಜಾರಿಯಲ್ಲಿದ್ದ ಒಂದು ಲಕ್ಷ ರೂ.ಗಳ ಅಪಘಾತ ವಿಮೆಯನ್ನು ಎಲ್ಲ ಪ್ರಯಾಣಿಕರಿಗೂ ಈಗ ಅನ್ವಯಿಸುವಂತೆ ಬಿಎಂಟಿಸಿ ನಿಯಮ ರೂಪಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X