ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಹಬ್‌ ಬೆಂಗಳೂರಲ್ಲಿ ರಾತ್ರಿ ಮಲ ಹೊರುವ ಪದ್ಧತಿ!?

By Staff
|
Google Oneindia Kannada News

ಐಟಿ ಹಬ್‌ ಬೆಂಗಳೂರಲ್ಲಿ ರಾತ್ರಿ ಮಲ ಹೊರುವ ಪದ್ಧತಿ!?
ಈ ಪದ್ಧತಿಯನ್ನು ಪ್ರೋತ್ಸಾಹಿಸುವುದು ಅಪರಾಧವಾದರೂ, ಇಲ್ಲಿಯವರೆಗೆ ಯಾರೂ ಬಂಧಿತರಾಗಿಲ್ಲ

ಬೆಂಗಳೂರು : ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ ಜಗತ್ತಿನ ದೃಷ್ಟಿಯನ್ನು ತನ್ನತ್ತ ನೆಟ್ಟಿಸಿಕೊಂಡಿರುವ ಬೆಂಗಳೂರಿನಲ್ಲಿ ರಾತ್ರಿ ತಲೆಯ ಮೇಲೆ ಮಲ ಹೊರುವ ಪದ್ಧತಿ ! ಯಾರು ಒಪ್ಪಿಕೊಳ್ಳದಿದ್ದರೂ ಸರ್ಕಾರವಂತೂ ಒಪ್ಪಿಕೊಂಡಿದೆ.

ಈ ಆಘಾತಕಾರಿ ಸುದ್ದಿಯನ್ನು ಹೊರಗೆಡಹಿದ್ದು ಪೌರಾಡಳಿತ ಸಚಿವ ಎಸ್‌.ಆರ್‌.ಮೋರೆ. ಜನರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ವಿರೋಧ ಪಕ್ಷ ಬೊಬ್ಬೆ ಹೊಡೆಯುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ.

ಈ ಅಮಾನುಷ ಪದ್ಧತಿ ಬೆಂಗಳೂರಿನ ಕೆಲವು ಕೊಳಚೆ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲದೆ ಗುಲ್ಬರ್ಗಾ ಜಿಲ್ಲೆಯ ಯಾದಗೀರ್‌ ಮತ್ತು ಚಿತಾಪುರ ತಾಲ್ಲೂಕುಗಳಲ್ಲಿ ಇದು ಆಚರಣೆಯಲ್ಲಿದೆ ಎಂದು ಮೋರೆ ಇಂದು ಸುದ್ದಿಗಾರರಿಗೆ ತಿಳಿಸಿದರು.

ಈ ಆಚರಣೆ ನಿಷೇಧಿತವಾಗಿ 12 ವರ್ಷಗಳಾಗಿದ್ದರೂ ನಿರ್ಮೂಲನಗೊಳಿಸಲು ಸಾಧ್ಯವಾಗಿಲ್ಲ. ಇದನ್ನು ಪ್ರೋತ್ಸಾಹಿಸುತ್ತಿರುವ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಮೊದಲು ಚಿಕ್ಕೋಡಿ ಮತ್ತು ಗುರುಮಿಟ್ಕಲ್‌ನಲ್ಲಿ ಈ ಆಚರಣೆ ನಡೆಯುತ್ತಿದೆ ಎಂದು ತಪ್ಪಾಗಿ ಹೇಳಿದ್ದೆ. ಆದರೆ ಆ ತಾಲ್ಲೂಕುಗಳಲ್ಲಿ ಈ ಅಮಾನುಷ ಪದ್ಧತಿ ಆಚರಣೆಯಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಪದ್ಧತಿಯನ್ನು ಪ್ರೋತ್ಸಾಹಿಸುವುದು ಅಪರಾಧವಾದರೂ, ಇಲ್ಲಿಯವರೆಗೆ ಯಾರು ದೂರು ಕೊಟ್ಟಿಲ್ಲ ಮತ್ತು ಯಾರೂ ಬಂಧಿತರಾಗಿಲ್ಲದಿರುವುದು ಸಮಸ್ಯೆಯ ಸಂಕೀರ್ಣತೆಗೆ ಹಿಡಿದ ಕನ್ನಡಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X