ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಗಾ ಬಡಾವಣೆಗೆ ಚಾಲನೆ ನೀಡಲು ಬಿಡಿಎ ರೆಡಿ

By Staff
|
Google Oneindia Kannada News

ಮೆಗಾ ಬಡಾವಣೆಗೆ ಚಾಲನೆ ನೀಡಲು ಬಿಡಿಎ ರೆಡಿ
ಮುಂದಿನ ಎರಡು ವರ್ಷಗಳಲ್ಲಿ ಬಳ್ಳಾರಿ ಮತ್ತು ಹೊಸೂರು ರಸ್ತೆ ನಡುವೆ 50ಸಾವಿರ ನಿವೇಶನಗಳ ಹೊಸ ಬಡಾವಣೆ

ಬೆಂಗಳೂರು : ನಗರದಲ್ಲಿ 50 ಸಾವಿರ ನಿವೇಶನಗಳ ಹೊಸ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಧರಿಸಿದೆ.

ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ಒದಗಿಸಿದ ಪ್ರಾಧಿಕಾರದ ಆಯುಕ್ತ ಎಂ.ಎನ್‌.ವಿದ್ಯಾಶಂಕರ್‌, ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಮುಂದಿನ ಎರಡುತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದರು.

ಬಿಡಿಎ ಈಗಾಗಲೇ ಯೋಜನೆಯರ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಹೊಸ ಬಡಾವಣೆಗೆ ಹೆಸರನ್ನು ಇನ್ನು ಇಟ್ಟಿಲ್ಲ. ಸುಮಾರು 1800 ಕೋಟಿ ರೂ. ವೆಚ್ಚದ ಈ ಯೋಜನೆ ಸರ್ಕಾರದ ಅಂಗೀಕಾರಕ್ಕಾಗಿ ಕಾಯುತ್ತಿದೆ. ಅರ್ಕಾವತಿ ಯೋಜನೆಯನ್ನು ಹೈಕೋರ್ಟ್‌ ಸಿಂಧುಗೊಳಿಸಿದ ಬೆನ್ನಲ್ಲಿಯೇ ಈ ಯೋಜನೆಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ ಎಂದು ವಿದ್ಯಾಶಂಕರ್‌ ಹೇಳಿದರು.

ಹೊಸ ಬಡಾವಣೆಯ ಸ್ಥಳವನ್ನು ಪ್ರಾಧಿಕಾರ ಬಹಿರಂಗಪಡಿಸಿಲ್ಲ. ಬಳ್ಳಾರಿ ರಸ್ತೆ ಮತ್ತು ಹೊಸೂರು ರಸ್ತೆ ಮಧ್ಯೆಈ ಬಡಾವಣೆ ತಲೆ ಎತ್ತಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಬಿಡಿಎ ನಿರ್ಮಿಸಿದ ಬಡಾವಣೆಗಳಲ್ಲಿ ಮೆಗಾ ಬಡಾವಣೆ ಎಂಬ ಖ್ಯಾತಿಗೆ ಈ ಯೋಜನೆ ಪಾತ್ರವಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X